Friday, February 6, 2009

ವ್ಯಾಲಂಟೈನ್ಸ್ ಡೇ ಆಚರಣೆ ಬೇಕಾ?

 

SANY0332ನಮ್ ಕಾಫಿ ಕ್ಲಬ್ಬಿನಲ್ಲಿ ಈ ರೀತಿಯದೊಂದು ಚರ್ಚೆ ಶುರುವಾಗಿದೆ. 
ಇಲ್ಲೇ ಪಕ್ಕದಲ್ಲಿ ಒಂದು ಪೋಲ್ ಇದೆ ನಿಮ್ ಓಟು ಚಲಾಯಿಸಿ, ಜಾಗೋ!
ಇದ್ರ ಬಗ್ಗೆ ಮಾತಾಡ್ಬೇಕು ಅನ್ನೋರು ಇಲ್ಲಿ ಕಮೆಂಟು ಬರೆದು ಹಾಕಿ.
ಚರ್ಚೆಯಿಂದ ಯಾವ ದೇಶವೂ ಉದ್ಧಾರವಾದ ಉದಾಹರಣೆ ಫೆ ೬, ೨೦೦೯ರ ವರೆಗೆ ಒಂದೂ ಕಂಡು ಬಂದಿಲ್ಲ. ಹೀಗಾಗಿ ಉದ್ದುದ್ದ  ಬರೆದು ನಿಮ್ಮನ್ನು ಇತರರನ್ನು ಹಿಂಸಿಸಬೇಡಿ.
ಚುಟುಕಾಗಿ, ಮೊನಚಾಗಿ ನಾಲ್ಕು ಸಾಲು ಗೀಚಿ, ಕಾಫಿ ಹಬೆ ಆರುವುದರೊಳಗೆ!

23 comments:

 1. ಕಾಫೀಯವರೆ..

  ಯಾರು ಏನು ಮಾಡಿದರೇನು..?

  ಏನು ಬೇಕೊ ಅದನ್ನ ಮಾಡಿರ್ತಾರೆ..

  ಏನು ಆಗಬೇಕೊ ಅದಾಗಿರ್ತದೆ..

  ನಿಮಗೆ ಮಾಡಬೇಕಾ..?

  (ಅಪ್ಪ , ಅಮ್ಮನನ್ನೊಮ್ಮೆ ಕೇಳಿ)... ಮಾಡಿ..!

  ನನ್ನ ಪ್ರತಿಕ್ರಿಯೆ ಎಡವಟ್ಟಾಗಿದ್ರೂ..

  ನಿಮ್ಮ ಕಾಫೀ ಸಕತ್ತಾಗಿದೆ..

  ಹೀಗೆ ಮುಂದುವರಿಯಲಿ..!

  ReplyDelete
 2. ಸಿಮೆಂಟು ಮರಳು...ರವರೇ

  ಪ್ರತಿಕ್ರಿಯೆ ಯಡವಟ್ಟಾಗಿದ್ದರೂ
  ನಮ್ಮಂತಹ ಯಡವಟ್ಟರಿಗೆ ಅದು ಅರ್ಥವಾಗುತ್ತೆ ಬಿಡಿ.
  ಆದ್ರೆ ನಾವು ಮಾಡೋದಕ್ಕೆ
  ನಮ್ ಅಪ್ಪ ಅಮ್ಮನ
  ಪರ್ಮಿಶನ್ ಸಾಕಲ್ವೇ
  ಶ್ರೀರಾಮ ಸೇನೆ ಎಂಬ ‘ಅಪ್ಪ ಅಮ್ಮ’
  ಬೇಕಿಲ್ಲ ಅಲ್ವೇ?

  ReplyDelete
 3. kafiklab nodide sri rama sene valentines day oppose maduvudarally tappenide.?preeti hesralli nadeyudellavanna oppabeka..?preeti preeti yagiddare olleyadu aadre premigal preeti yava reetiyadu vishleshne agatya anno anisike nandu

  ReplyDelete
 4. ಅನಾನಿಮಸ್ಸರೇ,
  ಶ್ರೀರಾಮ ಸೇನೆಗೆ ತಮ್ಮ ಸಂಸೃತಿಯನ್ನು ಪಾಲಿಸುವ ಹಕ್ಕಿರುವ ಹಾಗೆಯೇ ವ್ಯಾಲಂಟೈನ್ಸ್ ಡೇ ಆಚರಿಸುವವರಿಗೆ ಇತರಿರಿಗೆ ತೊಂದರೆಯಾಗದ ಹಾಗೆ ಅದನ್ು ಆಚರಿಸುವ ಹಕ್ಕಿದೆ.
  ವಿರೋಧಿಸುವುದಕ್ಕೆ, ಪ್ರತಿಭಟಿಸುವುದಕ್ಕೆ ಅನೇಕ ಸಂವಿಧಾನ ಬದ್ಧ ಮಾರ್ಗಗಳಿವೆ. ಅವನ್ನೆಲ್ಲಾ ಕಡಗಳಿಸುವುದು ಸರಿಯೇ?

  ReplyDelete
 5. ಅಲ್ಲ ಬೇಕಾದವರು ಮಾಡಿಕೋತಾರೆ ಬೇಡದವರು ಸುಮ್ನಿರ್ತಾರೆ ಅದು ಅವರವರ ಇಷ್ಟ, ಅದನ್ನು ಸಂಸ್ಕೃತಿಯ ಅವಮಾನ, ಬಿಗುಮಾನ ಎಂದೆಲ್ಲ ಬಿಂಬಿಸಿ ಗಬ್ಬೆಬ್ಬಿಸಬೇಕ್ಯಾಕೆ! ನಮ್ಮ ಜನಕ್ಕೆ ಈಗಿನ ಯುವ ಸಮುದಾಯಾನಾ ಹಳಿಯೋಕೆ ಕಾರಣಗಳು ಬೇಕು, ಹುಡುಕ್ತಿರ್ತವೆ ಏನೂ ಸಿಗಲಿಲ್ಲ ಅಂದ್ರೆ ಇಂತಹ ಸಣ್ಣವಿಷಯಗಳಿಗೇ ಹೆಚ್ಚು ಪ್ರಚಾರ ಸಿಗುವಂತೆ ಚರ್ಚಿಸುತ್ತಾರೆ!!

  ReplyDelete
 6. 100% ಬೇಕು.... ಪ್ರೀತಿ ಮಾಡುವವರಿಗೆ ಒಂದು ದಿನ ಅಂತ ಇದ್ರೆ ಅದಕು ಕಣ್ ಹಾಕ್ತಾರೆ ಪಾಪಿಗಳು

  ReplyDelete
 7. ಹೌದು ಹೇಮ.. ಸರಿಯಾಗಿ ಹೇಳಿದ್ರಿ. ಯಾರು ಏನೇ ಮಾಡ್ಲಿ, ನಾನಂತೂ ಈ ಸಾರಿ valentines ಡೇ ದಿನ ನ್ಯೂಸ್ ಚಾನೆಲ್ ನೋಡ್ತಾ ಕೂಡಬೇಕು ಅಂತ ಅನ್ಕೊಂಡಿದಿನಿ. ಸಕತ್ entertaining ಇರತ್ತೆ. ಈ ರಾಮ ಸೇನೆಯವರ ಲೀಲೆಗಳನ್ನ ನೋಡಕ್ಕೆ.. ಏನಂತೀರ ?

  ReplyDelete
 8. ಸಂದೇಶರೇ,
  ಪ್ರೀತಿ ಮಾಡುವವರೆಲ್ಲಾ ಒಂದೇ ದಿನ ಮಾಡಿದರೆ ಒಂಭತ್ತು ತಿಂಗಳ ನಂತರ ಒಂದೇ ದಿನ ಆಸ್ಪತ್ರೆಗಳೆಲ್ಲಾ ತುಂಬಿ ತುಳುಕಿ ಬಹು ದೊಡ್ಡ ಹಂಗಾಮ ಆಗಿಬಿಡುತ್ತದಲ್ಲವೇ? ಯೋಚಿಸಿ...

  -ನಗೆ ಸಾಮ್ರಾಟ್

  ReplyDelete
 9. ನಿಜವಾದ ಪ್ರೇಮಿಗಳಿಗೆ ಪ್ರತಿ ದಿನವೂ ಹಬ್ಬ,ಅದಕ್ಕೆ ಹೀಗೆ ಪ್ರತ್ಯೇಕವಾದ ದಿನದ ಅಗತ್ಯ ಇಲ್ಲ. ಒಂದು ಹುಡುಗ ಅಥವಾ ಹುಡುಗಿ ತಾನು ಪ್ರೀತಿಸಿದ ವ್ಯಕ್ತಿ ಇಂದ ಏನನ್ನೂ ಬಯಸಬಾರದು, ಪ್ರೀತಿಯ ಹೊರತಾಗಿ.. ಆದೆ ನಿಷ್ಕಲ್ಮಶ ಹಾಗು ನಿಸ್ವಾರ್ಥ ಪ್ರೀತಿ. ಅಂತ ಪ್ರೀತಿಗೆ ಯಾವ ಪ್ರೇಮಿಗಳ ದಿನದ ಅಗತ್ಯವೂ ಇಲ್ಲ..

  ReplyDelete
 10. ಹೇಮಕ್ಕ,
  ನಿಮ್ಮ ಕಾಫಿ ಕ್ಲಬ್ ಚೆನ್ನಾಗಿದೆ. ನಮ್ಮ ಕಟ್ಟೆಯಲ್ಲಿ ಕೂತು ನಿಮ್ಮ ಕ್ಲಬ್ಬಿಂದ ಕಾಫಿ ಕುಡೀತೀವಿ.
  ಒಂದು ಸಣ್ಣ ಸಜೆಶನ್.
  ನೀವು ವ್ಯಾಲೆಂಟೈನ್ ಡೇ ಬಗ್ಗೆ ಸರ್ವೇ ಹಾಕಿದೀರಲ್ಲ, ಅದ್ರಲ್ಲಿ ಬರೀ ಬೇಕು, ಬೇಕೆ ಬೇಕು, ಅಷ್ಟೆ ಇದೆ. ಬೇಡ, ಇಲ್ಲದೇ ಇದ್ರೂ ಪರವಾಗಿಲ್ಲ, ಡೋಂಟ್ ಕೇರ್, ಯಾವನಿಗೆ ಬೇಕ್ರೀ ಇದೆಲ್ಲಾ, ನಮಗೆ ಬೇರೆ ಕೆಲಸ ಕೂಡಾ ಇದೆ ಅನ್ನೋ ಆಪ್ಶನ್ ಇದ್ದಿದ್ರೆ, ಇನ್ನೂ ಪ್ರಾಮಾಣಿಕ ಉತ್ತರಗಳೂ ಸಿಗ್ತಾ ಇದ್ವು.
  ಏನಂತೀರಾ?
  ನಮ್ಮ ಕಟ್ಟೆಗೂ ಒಮ್ಮೆ ಬನ್ನಿ, ಕೂತು ಮಾತಾಡೋಣ.

  ಕಟ್ಟೆ ಶಂಕ್ರ
  http://somari-katte.blogspot.com

  ReplyDelete
 11. ನಾನು ಹೇಳೋದಾದ್ರೆ ಹಿಂದೆನೂ ವ್ಯಾಲೆಂಟನ್ಸ್ ಆಚರಿಸುತ್ತಿದ್ರು. ರಾಖೀನೂ ಆಚರಿಸುತ್ತಿದ್ರು. ರಾಖೀ ದಿವಸ ಹುಡುಗರು ಕಾಲೇಜಿಗೆ ಬರುತ್ತಿರಲಿಲ್ಲ. ವ್ಯಾಲೆಂಟನ್ಸ್ ದಿವಸ ಹುಡುಗಿಯರು ನಿಜವಾಗಲೂ ನನ್ನನ್ನು ನಂಬಿ ಪ್ಲೀಸ್ :-)(ಇದು ಸುಮಾರು ೧೫ ವರ್ಷಗಳ ಹಿಂದಿನ ವಿಷಯ ನಾನು ಹೇಳುತ್ತಿರುವುದು.

  ಇಂಚರ

  ReplyDelete
 12. ಶಂಕ್ರಣ್ಣಾ ನಿಮ್ ಕಟ್ಟೆ ಹೈಕ್ಳಿಗೆ ಪರ್ಮನೆಂಟ್ ಸರ್ವರ್ ಗಳು ನಾವು ಇನ್ಮೇಲೆ ಏನಂತೀರಿ? ನಮ್ ಕಾಫೀ ಕ್ಲಬ್ಬಿನಾ ವಿಶೇಷ ಇರೋದೆ ಅಲ್ಲಿ ಶಂಕ್ರಣ್ಣ, ಹಾಗೆಲ್ಲ ಆಪ್ಶನ್ ಕೊಟ್ರೆ ಕಾಫಿ ವಾಸನೆ ತಗಂಡು ಹಂಗೇ ಹೊಂಟೋಯ್ತಾರೆ ಯಾರು ಕುಡಿಯೋಕೆ ಬರಾಕಿಲ್ಲ ಅಂತ ಟ್ರಿಕ್ಸು ಎಂಗೈತೆ ;)?
  ಕಟ್ಟೆಗೆ ಬರ್ತಿರ್ತೀನಿ ಅವಾಗವಾಗ!

  ReplyDelete
 13. ವಿದ್ಯ, ಆಹಾ ಎಂತಹ ದೊಡ್ ಮಾತು ಹೇಳಿದ್ರೀ, ನಾನು ಏನು ಮಾಡೋದು ಅಂತಿದ್ದೆ, ಇಬ್ರೂ ಕಾಫಿ ಕುಡೀತ ಅವ್ರ ಮಂಗ ಚೇಷ್ಟೆಗಳನ್ನ ಎಂಜಾಯ್ ಮಾಡೋಣ ಏನಂತೀರಿ? ;)

  ReplyDelete
 14. This comment has been removed by the author.

  ReplyDelete
 15. Oooh.. sure hema.. ;)

  ಈ ವರ್ಷ ರಾಮ ಸೇನೆಯವರ ಆಟದಿಂದ , ಕೆಲವು singles ಗೆ (GF BF ಇಲ್ಲ ಅಂತ ಹೇಳಕ್ಕಾಗದೆ ಇರೋರು ) valentines ಡೇ ಆಚರಿಸದೆ ಇರೋಕ್ಕೆ ಒಂದು ನೆಪ ಸಿಕ್ಕಂಗಾಗಿದೆ. "ಯಾಕಪ್ಪ? ಏನ್ ಮಾಡ್ತಾ ಇದ್ದೀಯ valentines ಡೇ ದಿನ?" ಅಂತ ಕೀಳದ್ರೆ , "ನಾವು ರಾಮ ಸೇನೆ ಕಡೆಯವರು , ಆಚರಿಸಲ್ಲ " ಅಂತ ಉತ್ತರ ಬರ್ತಾ ಇದೆ . self consoling answers.. :)

  ReplyDelete
 16. ಹ್ಹ ಹ್ಹ ಅಲ್ವೇ ವಿದ್ಯ ಒಳ್ಳೇ ಐಡಿಯಾ! ಗೆಳೆಯರ ಮುಂದೆ ಮಾನ ಮರ್ಯಾದೆ ಉಳಿಸ್ಕೋಳ್ಳಬಹುದು. ಗಿಫ್ಟ್ ರೋಸು ಅಂತ ಖರ್ಚು ಮಾಡೋ ಹಾಗಿರಲ್ಲ ದುಡ್ಡೂ ಉಳಿಯುತ್ತೆ, ರಿಸೆಶನ್ ಗೆ ಮದ್ದು, ಅರೇ ಎಷ್ಟೊಂದು ಪ್ರಯೋಜನಗಳು!!

  ReplyDelete
 17. ನಿಜವಾದ ಪ್ರೇಮಿಗಳಿಗೆ ಎಲ್ಲ ದಿನಾನು ಒಂದೇ ರೀತಿ. ಅದಕ್ಕಂತ ಪ್ರೇಮಿಗಳ ದಿನದ ಅಗತ್ಯ ವಿಲ್ಲ. ಬರಿ ಟೈಮ್ ಪಾಸಿಗೊಸ್ಕರ ಪ್ರೀತಿಸುವವರಿಗೋಸ್ಕರ ಈ ಪ್ರೇಮಿಗಳ ದಿನ. ಪ್ರೇಮಿಗಳ ನಡುವೆ ಪ್ರೀತಿ ನಂಬಿಕೆ ವಿಶ್ವಾಸ ಅನ್ನೋ ಉಡುಗೊರೆ ಇರಬೇಕೆ ಹೊರತು ಅದಕ್ಕೊಂದು ದಿನ ತನ್ನ ಪ್ರೀತಿನ ತೋರಿಸುವದಕೊಸ್ಕರ ಉಡುಗೊರೆ ಕೊಡೋದು ಟ್ರೀಟ್ ಕೊಡಿಸೋದು. ಇದೆಲ್ಲ ಪ್ರೀತಿನೆ ಅಲ್ಲ. ರಾಮ ಸೇನೆ ಯವರು ಹೇಳೋದರಲ್ಲಿ ತಪ್ಪೇನಿದೆ ಪ್ರೀತಿಸಿದ ನಂತರ ಮದುವೆ ಆಗಲೇ ಬೇಕು. ಸೇನೆಯವರು ಮದುವೆ ಮಾಡುತ್ತಾರೆ ಅಂತ ಪ್ರೇಮಿಗಳು ಯಾಕೆ ಹೆದರ್ಕೊಬೇಕು? ಬರಿ ಲೈಫ್ ನ ಎಂಜಾಯ್ ಮಾಡುವದಕ್ಕಾಗಿ ಪ್ರೀತಿಸಬಾರದು. ಕೊನೆತನಕ ಜೊತೆಯಾಗಿರಬೇಕು. ರಾಮ ಸೇನೆಯವರು ಪ್ರೇಮಿಗಳ ದಿನನ ವಿರೋಧಿಸುವದನ್ನ ನಾನು ಒಪ್ಪುತೀನಿ ಆದ್ರೆ ಅವರ ಹೋರಾಟದ ರೀತಿ ಬದಲಾಗಬೇಕು ಅಷ್ಟೇ

  ReplyDelete
 18. >>> ರಾಮ ಸೇನೆ ಯವರು ಹೇಳೋದರಲ್ಲಿ ತಪ್ಪೇನಿದೆ ಪ್ರೀತಿಸಿದ ನಂತರ ಮದುವೆ ಆಗಲೇ ಬೇಕು.
  ಆಗಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸುವ ಹಕ್ಕು ಪ್ರೇಮಿಗಳದ್ದು. ಅದನ್ನು ನಿರ್ಧರಿಸುವ ಹಕ್ಕು ಯಾವ ದೊಣ್ಣೆ ನಾಯಕನಿಗೂ ಇಲ್ಲ.

  ReplyDelete
 19. ಇಲ್ಲಿ ಹಕ್ಕಿನ ಪ್ರೆಶ್ನೆ ಬರಲ್ಲ
  ಮದುವೆ ಆಗೋದಿಕ್ಕೆ ಇಷ್ಟ ಇಲ್ಲ ಅಂದ್ರೆ ಪ್ರೀತಿ ಯಾಕೆ ಮಾಡಬೇಕು?
  ಒಬ್ರನ್ನ ಪ್ರೀತಿ ಮಾಡಿ ಸುತ್ತಾಡಿ ಇನ್ನೊಬ್ರನ್ನ ಮದುವೆ ಮಾಡಿಕೊಳ್ಳೋದು ಎಷ್ಟು ನ್ಯಾಯ?

  ReplyDelete
 20. ಇಲ್ಲಿ ಹಕ್ಕಿನ ಪ್ರೆಶ್ನೆ ಬರಲ್ಲ ಮದುವೆ ಆಗಲ್ಲ ಅಂತಿದ್ರೆ ಪ್ರೀತಿ ಯಾಕೆ ಮಾಡಬೇಕು? ಒಬ್ಬರನ್ನ ಪ್ರೀತಿ ಮಾಡಿ ಅವರ ಜೊತೆ ಸುತ್ತಾಡಿ ನಂತರ ಇನ್ನೊಬ್ರನ್ನ ಮಾಡುವೆ ಯಗೋದು ಯಾವ ನ್ಯಾಯ? ಇದೇನಾ ಪ್ರೀತಿ ಪ್ರೇಮ?

  ReplyDelete
 21. ಪ್ರಶ್ನೆ ಇರುವುದು ಹಕ್ಕು ಹಾಗೂ ಅಧಿಕಾರದ ಬಗ್ಗೆಯೇ ಭಾವನಾಲಹರಿಯವರೇ.
  ಯಾರನ್ನು ಪ್ರೀತಿಸಬೇಕು, ಯಾರನ್ನು ಮದುವೆಯಾಗಬೇಕು ಎಂಬುದು ನಮ್ಮ ದೇಶದಲ್ಲಿ ವಯ್ಯಕ್ತಿಕವಾದ ಹಕ್ಕಿನ ಪ್ರಶ್ನೆ.
  ಡೇಟಿಂಗ್ ಎಂಬ ಪದ್ಧತಿ ಬಂದಿರುವುದು ನಮ್ಮ ಸಮಾಜಕ್ಕೆ ಉತ್ತವಾದದ್ದಾ ಇಲ್ಲವೇ ಕೆಡುಕಿನದಾ ಎಂಬುದನ್ನು ಇನ್ನೊಮ್ಮೆ ಚರ್ಚಿಸೋಣ. ಆದರೆ ಹಾಗೆ ಡೇಟ್ ಮಾಡುವ ಹಕ್ಕು ಹದಿನೆಂಟು ಮೀರಿದ ಪ್ರತಿಯೊಬ್ಬ ಪ್ರಜೆಗೂ ಇದೆ(ಇನ್ನೊಬ್ಬರಿಗೆ ಕಿರಿಕಿರಿ ಉಂಟು ಮಾಡದ ಹಾಗೆ).
  ಅದನ್ನು ಪ್ರಶ್ನಿಸುವ ಅಧಿಕಾರ ಶ್ರೀರಾಮ ಸೇನೆಯವರಿಗೆ ಕೊಟ್ಟಿದ್ದು ಯಾರು ಎಂಬುದು ನಮ್ಮ ಪ್ರಶ್ನೆ.

  ReplyDelete
 22. ಇವತ್ತು ಕ್ಲಾಸ್ ನಲ್ಲಿ ಜರ್ನಲಿಸಮ್ ಸರ್ ಹೇಳಿದ್ರು.. ಈ ಶ್ರೀ ರಾಮ್ ಸೇನೆಯವ್ರು ಬಿಡ್ಲಿಲ್ಲ ಅಂದ್ರೆ ಪರ್ವಾಗಿಲ್ಲ. Krishna is a great lover ಅವತ್ತೇ ಆಚರಿಸಿ ಅಂತ... ಮಜ ಅನಿಸ್ತು...

  ReplyDelete
 23. ಮೃಗನಯನೀಯವರೇ,
  ಕಾಫಿ ಕ್ಲಬ್ಬಿಗೆ ಸ್ವಾಗತ.
  ರಾಮ ಸೇನೆಗೆ ವಿರುದ್ಧವಾಗಿ ಕೃಷ್ಣ ಸೇನೆ ಕಟ್ಟಿದರೆ ಹೇಗೆ?
  ನಮ್ ಕಾಲೇಜಲ್ಲೂ ಒಬ್ರು ನೀತಿ ಪಾಠ ಮಾಡೋವಾಗ ಕೃಷ್ಣನ ಹಾಗೆ ಲೀಲಾ ವಿನೋದ ತೋರಿಸಬೇಕಾದರೆ ಮೊದಲು ಆತನ ಹಾಗೆ ಪೂತನಿಯ ವಿಷವನ್ನು ಅರಗಿಸಿಕೊಂಡು, ಮುಷ್ಟಿಕ ಚಾಣೂರನ್ನು ಎದುರಿಸಿ ದಕ್ಕಿಸಿಕೊಳ್ಳಬೇಕು ಎಂದಿದ್ದರು!
  ಕ್ವಾಲಿಫೇಕಷನ್ನು ದೊಡ್ಡದಾಯ್ತು ಅಲ್ವಾ? :)

  ReplyDelete

ಕಾಫಿ ಕುಡೀತಾ ಹಂಗೇ ಒಂದಿಷ್ಟು ಮಾತಾಡಿ