Wednesday, February 18, 2009

ನೀವು ಡೈರಿ ಬರೀತೀರಾ?

diary ದಿನಚರಿ ಬರೆಯುವುದನ್ನು ಅನೇಕರು ಹವ್ಯಾಸದ ಹಾಗೆ, ಕೆಲವರು ವ್ರತದ ಹಾಗೆ, ಕೆಲವರು ಮಹಾ ಸಾಹಸದ ಹಾಗೆ ಭಾವಿಸುತ್ತಾರೆ. ದಿನಚರಿಯೆಂಬುದು ತೀರಾ ಖಾಸಗಿಯಾದ ಸಂಗತಿಯಾದ್ದರಿಂದ ಅದರಲ್ಲಿ ಏನಿರಬೇಕು, ಏನಿರಬಾರದು ಎಂದು ಸಾರ್ವಜನಿಕವಾಗಿ ಚರ್ಚಿಸುವುದು ಅನುಪಯುಕ್ತ.

ಡೈರಿ ಬರೆಯುವುದರಿಂದ ಕೈ ಬರಹ ದುಂಡಗಾಗುತ್ತೆ, ಕೆಲ ಸಮಯ ಮನಸ್ಸು ಏಕಾಗ್ರವಾಗಿರುತ್ತೆ, ಪೆನ್ನು, ಶಾಹಿ, ಡೈರಿ ಮಾರುವ ಸ್ಟೇಷನರಿ ಅಂಗಡಿಯವನಿಗೆ ಲಾಭವಾಗುತ್ತದೆ ಎಂಬೆಲ್ಲಾ ‘ಪ್ರಮುಖ’ ಸಂಗತಿಗಳನ್ನು ಬಿಟ್ಟು ದಿನಚರಿ ಬರೆಯುವುದರಿಂದ ನೀವು ಕಂಡುಕೊಂಡಿರುವ ಅನುಕೂಲಗಳೇನು, ಅದು ನಿಮಗೆ ಒದಗಿಸಿದ ಕಂಫರ್ಟ್ ಎಂಥದ್ದು, ಡೈರಿ ನಿಮ್ಮ ಬದುಕನ್ನು ರೂಪಿಸಿಕೊಳ್ಳುವುದರಲ್ಲಿ ನೀಡಿದ ನೆರವಿನ ಬಗ್ಗೆ ಚುಟುಕಾಗಿ ಬಿಸಿ ಕಾಫಿ ಹೀರುತ್ತ ಹರಟಿದ ಹಾಗೆ ಬರೆಯುತ್ತೀರಾ?

ಇದು ಕಾಫಿ ಕ್ಲಬ್ಬು. ಇಲ್ಲಿ ಫಾರ್ಮಾಲಿಟಿ ಬೇಕಿಲ್ಲ. ಮುಕ್ತವಾಗಿ ಮಾತಾಡಿ... 

12 comments:

 1. ಇಲ್ಲಾ ಸಾರ್,
  ನನಗೆ ಡೈರಿ ಬರೆಯುವ ಅಭ್ಯಾಸ ಇಲ್ಲ.
  ಆದ್ರೆ, ಸಿಂಪಲ್ಲಾಗಿ ಬರವಣಿಗೆ ಅಭ್ಯಾಸ ಇದೆ.
  ನಾನು ಬ್ಲಾಗಿನಲ್ಲಿ ಬರೆಯೋ ಲೇಖನಗಳನ್ನು ಮೊದಲು, ಪುಸ್ತಕದಲ್ಲಿ ಬರೆದು,
  ಅದರಲ್ಲೇ ಎಡಿಟ್ ಮಾಡಿ, ಫೈನಲ್ ಡ್ರಾಫ್ಟಿಗೆ ತಂದು, ಕೊನೆಯಲ್ಲಿ ಅದನ್ನು
  ಟೈಪು ಮಾಡಿ ಬ್ಲಾಗಿನಲ್ಲಿ ಹಾಕ್ತೀನಿ. ಹಾಗಾಗಿ, ನನ್ನ ಬರವಣಿಗೆ (Handwriting) ಸ್ವಲ್ಪ ಓಕೆ
  ಅನ್ಕೋತೀನಿ.
  ಅಷ್ಟೆ :)

  ಕಟ್ಟೆ ಶಂಕ್ರ

  ReplyDelete
 2. ಹುಂ ಹಾಗಾದ್ರೆ ನಿಮ್ಮ ಕೈಬರಹ ಅಂದವಾಗಲು ನಿಮಗೆ ಬರವಣಿಗೆ ನೆರವಾಗಿದೆ ;)
  ನಾವು ನೀವು ಮಾಮೂಲಾಗಿ ಲೇಖನ, ಪದ್ಯ ಬರೆಯುವುದಕ್ಕೂ ಡೈರಿ ಬರವಣಿಗೆಗೂ ವ್ಯತ್ಯಾಸವಿದೆ ಅನ್ನಿಸಲ್ವಾ?
  ಯಾರ್ಯಾರು ಎಷ್ಟು ಸೃಜನಶೀಲವಾಗಿ ತಮ್ಮ ದಿನಚರಿಯನ್ನು ಬಳಸಿಕೊಳ್ಳುತ್ತಾರೆ ಎಂದು ತಿಳಿಯುವ ಕುತೂಹಲ.

  ReplyDelete
 3. ಕಾಫೀ ಕ್ಲಬ್ ನವರೆ..

  ನಾನು ಡೈರಿ ಬರೆಯುವದಿಲ್ಲ......

  ಆದರೆ ಮೆಲುಕು ಹಾಕುವ ಕ್ಷಣಗಳನ್ನು
  ನೋಟ್ ಮಾಡಿಕೊಂಡಿರುತ್ತೇನೆ..
  ನನ್ನ ವ್ಯವಹಾರದ..
  ಲೆಕ್ಕಗಳ ಮಧ್ಯೆ...

  ಆತ್ಮ ಸಾಕ್ಷಿಯಾಗಿ ಹೇಳುತ್ತಿದ್ದೇನೆ..

  ನನ್ನ ಕೈ ಬರಹಗಳು

  "ಗಾಂಧೀ"ಯವರ ಹಾಗೆ ಇದೆ...

  ರುಚಿಕಟ್ಟಾದ... ಕಾಫೀ ..

  ಧನ್ಯವಾದಗಳು...

  ReplyDelete
 4. Dairy ಬರೆಯಲ್ಲ ಕಣ್ರೀ.. ಆದ್ರೆ ಅದರಲ್ಲಿ ಕವನಗಳ ತುಂಬಿಸುವೆ....

  ReplyDelete
 5. ಪ್ರದೀಪ್ ಸರ್,

  ಅದೂ ಒಂಥರಾ ಡೈರಿ ಬರ್ದಂಗೇ ಅಲ್ವಾ?:)

  -ರಂಜಿತ್

  ReplyDelete
 6. ಸಿಮೆಂಟು ಮರಳು...
  ಇದೇನ್ರಿ ಹೆಸ್ರು ನಮ್ ಸೂರಿ ಜಂಗ್ಲಿಯ ‘ಕಬುಣ, ಪಾತ್ರೆ’ ತರ ಇದೆ!
  ಮೆಲುಕು ಹಾಕುವ ಕ್ಷಣಗಳ್ನ ನೋಟ್ ಮಾಡ್ತೀರಾ? ಎಂಥದ್ದು ನೀವು ಆಗಾಗ ಮೆಲುಕು ಹಾಕೋದು? ಅದೂ ಲೆಕ್ಕಗಳ ಮಧ್ಯೆ? :)

  ಗಾಂಧಿ ಕೈಬರಹ... ಕನಿಷ್ಟ ಪಕ್ಷ ಗಾಂಧಿಯವರಿಂದ ಅದನ್ನಾದರೂ ಕಲಿತೀರಲ್ಲ ಗ್ರೇಟ್! ;)

  - ನಗೆ ಸಾಮ್ರಾಟ್

  ReplyDelete
 7. ನಾನು ಡೈರಿ ಬರೆಯಲ್ಲ. ಆದ್ರೆ ಡೈರಿ ಅಂದ್ರೆ ಇಷ್ಟ, ಹಾಲಿನ ಡೈರಿಗೆ ಮೊದಲ ಪ್ರಾಶಸ್ತ್ಯ.
  ನನ್ನ ವೈರಿಗಳ ಹೆಸರು ಬರೆಯೋದಕ್ಕೆ ಒಂದು ಕಾಲದಲ್ಲಿ ಡೈರಿ ಇಡುತ್ತಿದ್ದೆ.
  ಆದ್ರೆ ಒಂದು ಡೈರಿ ಸಾಕಾಗದೆ ವರ್ಷವೊಂದಕ್ಕೆ ನಾಲ್ಕೈದು ಬೇಕಾದ್ದರಿಂದ ಆ ಐಡಿಯಾ ಬಿಟ್ಟು ಬಿಟ್ಟೆ.
  ಆಗೀಗ ಟಿಶ್ಯು ಪೇಪರುಗಳನ್ನು ನನ್ನ ‘ಭಾವನೆ’ ಇಳಿಸುವ ಡೈರಿಯಾಗಿ ಬಳಸುತ್ತಿರುತ್ತೇನೆ(ಡಬ್ಬಲ್ ಮೀನಿಂ ಏನೂ ಇಲ್ಲಪ್ಪ!) :)

  ನಗೆ ಸಾಮ್ರಾಟ್

  ReplyDelete
 8. ಮೊದ್ಲು ನಿಯತ್ತಾಗಿ ಡೈರಿ ಬರೀತಿದ್ದೆ ಸಾರ್. ಹಾಸ್ಟೆಲ್ ನಲ್ಲಿದ್ನಲ್ಲ.. ಅಲ್ಲಿನ ಹುಡುಗ್ರು ನಾನಿಲ್ದಾಗ ಡೈರೀನ ಹಾಯ್ ಬೆಂಗಳೂರ್ ಗಿಂತ ಇಂಟ್ರೆಸ್ಟ್ ನಿಂದ ಬ್ಯಾಗ್ ನೊಳಗೆ ಬೀಗ ಹಾಕಿಟ್ರೂ ಅದ್ಯಾವ್ದೋ ಟೆಕ್ನಿಕ್ ನಿಂದ ತೆಗ್ದು ಕದ್ದು ಓದ್ತಾ ಇದ್ರು.ಗೊತ್ತಾದ ತಕ್ಷಣ ಡೈರಿಯ ಮೊದಲ್ನೇ ಪುಟದಲ್ಲೇ ಇದು ಪರ್ಸನಲ್ ಪುಸ್ತಕ, ಕದ್ದು ಓದೋದು ತಪ್ಪು ಅಂತ ಬರ್ದಿದ್ದೆ.ಅದನ್ನೂ ನಕ್ಕೋಂಡು, ಚಪ್ಪರಿಸಿಕೊಂಡಉ ಓದಿದ್ರು ಅನ್ನೋದೂ ಗೊತ್ತಾಯ್ತು.

  ಅದೇ ಶ್ರದ್ಧೇನ ತಮ್ಮ ಪಠ್ಯ ಪುಸ್ತಕದಲ್ಲಿ ತೋರಿಸ್ತಿದ್ರೆ ಎಲ್ರೂ ಬ್ರಿಲ್ಲಿಯಂಟಾಗಿ ಪಾಸಾಗಿ ನಾಸಾಗೆ ಹೋಗ್ತಿದ್ರು ಅನ್ಸುತ್ತೆ.

  ನನ್ ರಹಸ್ಯ ಎಲ್ಲಾ ಹೀಗೆ ಪೋಲಾಗಿ ಹೋದದ್ರಿಂದ ಬರೆಯೋದು ನಿಲ್ಲಿಸ್ಬೇಕಾಗಿ ಬಂತು.

  ಡೈರಿ ಅನ್ನೋದು ನಮ್ಮ ವ್ಯಕ್ತಿತ್ವದ ಹುಳುಕುಗಳನ್ನ ತೋರ್ಸೋದಕ್ಕೆ, ನಮ್ಮನ್ನ ಮಾನಸಿಕವಾಗಿ ಬೆಳೆಸೋದಕ್ಕೆ ಬಳಕೆ ಆಗ್ಬೇಕು ಅಂತ ನನ್ನ ಭಾವನೆ.
  ಆದ್ರೆ ಜನಗಳಿಗೆ ಪಕ್ಕದವನ ಪರ್ಸನಲ್ ಮ್ಯಾಟರ್ ಗಳಲ್ಲಿ ಮೂಗು ತೂರ್ಸೋಕೆ ಜಾಸ್ತಿ ಇಂಟ್ರಸ್ಟ್.

  ಒಂದು ನೀತಿ ಕಲ್ತಿದ್ದೀನಿ.ಅದೇನಪ್ಪ ಅಂದ್ರೆ ನಿಮ್ಗೆ ಡೈರೀನ ಯಾರಿಗೂ ತೋರದ ಹಂಗೆ ಇಡೋಕೆ ಬರದೇ ಇದ್ರೆ ನಿಮ್ಗೆ ಡೈರಿ ಬರೆಯೋ ಅರ್ಹತೆ ಇಲ್ಲ ಅಂತ.

  -ರಂಜಿತ್.

  ReplyDelete
 9. ರಂಜಿತ್, ಡೈರಿಯಲ್ಲಿ ಕವನ ಬರೆಯುವುದು ಡೈರಿ ಬರೆದಂಗೆ ಹೇಗೆ ಆಗುತ್ತೆ? "ಡೈರಿ" ಅನ್ನುವ ಆಂಗ್ಲ ಪದದ ಅರ್ಥ, "ದಿನಚರಿ", ಅಥವಾ "ದಿನಚರಿ ಪುಸ್ತಕ". ಒಮ್ಮೆ ಕೈಯ್ಯಲ್ಲಿ ಬೇರಾವುದೇ ಪುಸ್ತಕವಿಲ್ಲದ್ದರಿಂದ ಅದರಲ್ಲಿ ಬರೆದೆ. (ಇದಕ್ಕಾದರೂ ಖಾಲಿ ಪುಸ್ತಕ ಪ್ರಯೋಜನಕ್ಕೆ ಬರಲಿ ಅಂತ) ಅದು ತುಂಬುವ ವರೆಗೂ ತುಂಬಿಸುವೆ....

  ReplyDelete
 10. ಕವನ ದಿನಚರಿಯಂತೂ ಅಲ್ಲ... ಅಲ್ವೇ ರಂಜಿತ್?! :-)

  ReplyDelete
 11. ಪ್ರದೀಪ್,
  ಹೌದು, ದಿನಚರಿ ಎಂದರೇನೆ ದಿನ ನಿತ್ಯದ ಆಗುಹೋಗುಗಳನ್ನು ದಾಖಲಿಸುವ ದಾಸ್ತಾವೇಜು. ಅದು ತೀರಾ ಖಾಸಗಿ ಅಬ್ಸರ್ವೇಷನ್ನುಗಳು, ವಿವರಗಳನ್ನು ಹೊಂದಿರುತ್ತೆ.
  ಅದಕ್ಕಾಗಿಯೇ ಅದನ್ನು ಪ್ರತ್ಯೇಕವಾಗಿ ಇಲ್ಲಿ ಹೇಳಿರುವುದು..

  ReplyDelete
 12. ಸರ್ ದಿನಚರಿ ಬರೆಯುವುದು ಹೇಗೆ ಎಂದು ಕೆಲವು ಸೂತ್ರಗಳನ್ನು ಏಳಿ

  ReplyDelete

ಕಾಫಿ ಕುಡೀತಾ ಹಂಗೇ ಒಂದಿಷ್ಟು ಮಾತಾಡಿ