ವೆಲ್ಕಮ್ ಟು ಕಾಫಿ ಕ್ಲಬ್!
ಹದವಾದ ಬಿಸಿಬಿಸಿ ಕಾಫಿ ಕಪ್ಪಿನಂತಹುದು ಈ ಬ್ಲಾಗು.
ತಲೆಕೆಡಿಸುವ ಚರ್ಚೆಗಳು, ಗಂಭಿರಾತಿಗಂಭೀರ ಬರಹಗಳು, ವೈಯಕ್ತಿಕ ಆರೋಪ ಪ್ರತ್ಯಾರೋಪಗಳು ಇವೆಲ್ಲವುಗಳಿಂದ ದೂರ ಉಳಿದು, ಬಿಸಿ ಕಾಫಿ ಕಪ್ಪಿನಂತಹ ನವಿರಾದ , ಓದಿದೊಡನೆ ರೆಫ್ರೆಶಿಂಗ್ ಅನಿಸುವಂತಹ ಬರಹಗಳನ್ನು ನಿಮಗೆ ಪರಿಚಯಿಸುವ ಪ್ರಯತ್ನ. ಕಾಫಿ ಕುಡಿಯುವಾಗಿನ ಆಹ್ಲಾದತೆ ಅನುಭವಿಸಿ ನೀವು ಹ್ಯಾಪಿಯಾಗಬೇಕೆಂಬ ಹಂಬಲ ನಮ್ಮದು. ನಮ್ಮ ಬ್ಲಾಗಿನ ಹೆಚ್ಚಿನ ಪರಿಚಯ ನಿಮಗೆ ನಮ್ಮ ಮುಂದಿನ ಬರಹಗಳಲ್ಲಿ ಆಗಲಿದೆ.
Saturday, January 31, 2009
Subscribe to:
Post Comments (Atom)
ಹೇಮಾರವರೆ,
ReplyDeleteಯಾರ್ರೀ ಇಲ್ಲಿ, ಒಂದು ಲೋಟ ಬಿಸಿ ಬಿಸಿ ಕಾಫಿ ಕೊಡಿ ಬೇಗ, ಜಾಗತಿಕ ಆರ್ಥಿಕ ಹಿಂಜರಿತದಿಂದ ಮನಸ್ಸೆಲ್ಲ ತಣ್ಣಗೆ ಕೊರೆವ ಚಳಿಗೆ ಸಿಕ್ಕಂತಾಗಿದೆ, ನಿಮ್ಮ ಕ್ಲಬ್ಬಿನ ಕಾಫಿ ಕುಡಿದು ಸ್ವಲ್ಪ ಸುಧಾರಿಸಿಕೊಳ್ಳೋಣ.
-ರಾಜೇಶ್ ಮಂಜುನಾಥ್
ಚಹಾ ಕೂಡ ಸಿಗುತ್ತಾ?! ;-)
ReplyDeleteಮೊದ್ಲೇ ನಂಗೆ ಕಾಫಿ ಕುಡಿಯೋದೊಂದು ಚಟ!
ReplyDeleteಇನ್ಮೇಲೆ ಇಲ್ಲೇ ಠಿಕಾಣಿ ಹೂಡ್ತೀನಿ. ಎಲ್ಲಿ, ಒಂದು ಸ್ಟ್ರಾಂಗ್ ಕಾಫಿ ಬರ್ಲಿ!!
ಒಳ್ಳೆಯ ಪ್ರಯತ್ನ. ಮಧ್ಯಕ್ಕೆ ನಿಲ್ಲಿಸದೆ, ಡಿಲೀಟ್ ಮಾಡದೆ ಮುಂದುವರೆಸಿ ಅಂತ ಹಾರೈಸ್ತೀನಿ.
ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ
ರಾಜೇಶ್,
ReplyDeleteಕಾಫಿಕ್ಲಬ್ಬಿಗೆ ಸ್ವಾಗತ! ನಮ್ಮ ಕ್ಲಬ್ಬಿಗೆ ಬಂದ ಮೇಲೆ ರಿಸೆಶನ್ ಇನ್ಪ್ಫ್ಲೇಶನ್ ಎಲ್ಲ ಮರೆತುಬಿಡಿ, ಇಲ್ಲಿ ನಿಮಗೇನಿದ್ದರು ಬರೀ ರಿಲ್ಯಾಕ್ಸೇಷನ್ನು :)
ಚಹಾ ಜೊತೆ ಚಕ್ಲಿ ಕೋಡಬಳೇನು ಸಿಗತ್ತೆ ಪ್ರದೀಪ್! ನೀವು ಕೇಳೋದು ಹೆಚ್ಚಾ ನಾವು ಕೊಡೋದು ಹೆಚ್ಚಾ :)
ReplyDeleteಚೇತನ ಮೇಡಂ,
ReplyDeleteನಿಮ್ಮ ಆರ್ಡರ್ ತಗೊಂಡಾಯ್ತು!! ಕಾಫೀ ಈಸ್ ಆನ್ ದಿ ವೇ :)
ನಿಮ್ಮ ಹಾರೈಕೆಗೆ ನಿಮಗೆ ಕಾಫೀ ಜೊತೆ ಚಾಕ್ಲೇಟ್ ಫ್ರೀ.... :)
ಪ್ರಿಯ ಕಾಪಿ ಕ್ಲಬ್ ಗೆಳೆಯರೇ ,
ReplyDeleteನಿಮ್ಮ ಕಾಪಿ ಕ್ಲಬ್ ನಲ್ಲಿ ಕುತ್ಕೊಂಡೆ ಮಾತಾಡ್ತಿದೀನಿ ನಿಮ್ಮ ಪ್ರಕಾರ "ವ್ಯಾಲಂಟೈನ್ಸ್ ಡೇ ನಮಗೆ ಬೇಕಾ? " ಅಂಥಾ ಕೇಳಿದಿರಲ್ಲ ಇಲ್ಲಿ ನೀವು ಬೇಡ ಅನೋ ಉತ್ತರನೆ ಕೇಳಿಲ್ಲ ಯಾಕೆ ಅಂಥ ತಿಳ್ಕೊಬಹುದ ??
ನಿಮ್ಮ ಉತ್ತರ ನೀವೇ ನೋಡಿ
1)ಹೌದು ಬೇಕೇ ಬೇಕು
2)ಅದಿಲ್ಲಾಂದ್ರೆ ನಮ್ಮ ಪ್ರಾಣ ಹೋಗುತ್ತೆ
3) ಅದು ನಮ್ಮ ಹಕ್ಕು
4)ಬೇಕು ಅಂದ್ರೆ ಬೇಕು ಅಷ್ಟೇ
ಗುರು ಅವರೇ,
ReplyDeleteನಮ್ಮದು ಕಾಫಿ ಕ್ಲಬ್ಬು.
ಸಾಧಾರಣ ಚರ್ಚೆಯ ಬ್ಲಾಗಲ್ಲ. ಹೀಗಾಗಿ ನಮ್ಮ ದಾರಿ ಕೊಂಚ ವಿಶಿಷ್ಟ.
ನಮ್ಮ ರಾಷ್ಟ್ರೀಯ ಮಾಧ್ಯಮಗಳು ಹಾಗೂ ಇಂಗ್ಲೀಷು ಪತ್ರಿಕೆಗಳು ಇಂಥ ಸಂಗತಿಯ ಬಗ್ಗೆ ನಮ್ಮ ಮುಂದಿಡುವ ಆಪ್ಷನ್‌ಗಳು ಹೆಂಗಿರುತ್ತವೆ ಅನ್ನೋದನ್ನ ನಿರೂಪಿಸೋದಕ್ಕೆ ಈ ಪೋಲು.
ಬಹುಶಃ ನಿಮಗೆ ಅದು ಕ್ಯಾಚ್ ಆಗಿದೆ.
ಸುಪ್ರೀತ್.ಕೆ.ಎಸ್