Saturday, November 2, 2013

ಮದುವೆಯ ಸೈಡ್ ಎಫೆಕ್ಟ್ಸ್!

 
ಫೇಸ್ ಬುಕ್ಕಿನಲ್ಲಿ ಕಂಡಿದ್ದು....
 
 
 

Saturday, June 30, 2012

ಸೂಪರ್ ಸ್ಟೂಡೆಂಟ್..!
ವಿ.ಸೂ:- ಕೊನೆಯ ಪಾಯಿಂಟ್ ಓದೋದನ್ನ ಮಾತ್ರ ಮಿಸ್ ಮಾಡ್ಕೋಬೇಡಿ...!

Wednesday, June 6, 2012

ಚಲನಚಿತ್ರಗಳು ನಮಗರಿವಾಗದಂತೆಯೇ ಕಲಿಸಿಕೊಡುವ ಪಾಠಗಳು..


ಹಾಲಿವುಡ್ ಹೇಳಿಕೊಡುವ ಪಾಠಗಳು:-

೧. ಕುಂಗ್ ಫು ಹೇಳಿಕೊಡುವುದು ಮತ್ತು ಅಭ್ಯಾಸ ಮಾಡುವುದು ಬಿಟ್ಟರೆ ಚೈನೀಸ್ ಜನರಿಗೆ ಬೇರೆ ಕೆಲ್ಸ ಇಲ್ಲ.
೨. ಶೇ ೫೦ ಕ್ಕೂ ಹೆಚ್ಚು ಅಮೇರಿಕನ್ನರು FBI / CIA ಏಜೆಂಟುಗಳಾಗಿ ಸದಾ ಮಫ್ತಿಯಲ್ಲಿರ್ತಾರೆ.
೩. ಅನ್ಯಗ್ರಹಜೀವಿಗಳು ಯಾವಾಗಲೂ ಅಮೇರಿಕಾವನ್ನೇ ಟಾರ್ಗೆಟ್ ಮಾಡ್ತಾರೆ.
೪. ಅಮೇರಿಲಾದಲ್ಲಿ ಮಾತ್ರ ನೀವು ರಕ್ತಪಿಪಾಸು (vampires), ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್ ರನ್ನು ನೋಡಬಹುದು


ಬಾಲಿವುಡ್ ಕಲಿಸಿಕೊಡುವುದು:-

೧. ವಿಲನ್ ಜೊತೆಗೆ ಫೈಟ್ ಮಾಡುವಾಗ ಚೂರೂ ನೋವಾಗದ ಹೀರೋ ಗೆ, ಹೀರೋಯಿನ್ನು ಗಾಯ ತೊಳೆವಾಗ ಇನ್ನಿಲ್ಲದಷ್ಟು ನೋವು ಬರುತ್ತೆ.
೨. ಪತ್ತೇದಾರರು / ಪೋಲೀಸರು ಯಾವಾಗಲೂ ಸಸ್ಪೆಂಡ್ ಆದ ಮೇಲೆಯೇ ಉತ್ತಮವಾಗಿ ಕೆಲಸ ಮಾಡಬಲ್ಲರು.
೩. ಹೀರೋ ರಸ್ತೆಯಲ್ಲಿ ಕುಣಿಯಲು ಶುರುಮಾಡಿದಾಗ ರಸ್ತೆಯಲ್ಲಿ ಹೋಗುವವರೆಲ್ಲರಿಗೂ ಸ್ಟೆಪ್ಸ್ ಹಾಕುವುದು ಗೊತ್ತಿರುತ್ತೆ.
೪. ಬಾಂಬ್ ನ ವೈರ್ ತುಂಡರಿಸುವಾಗ ಹೀರೋ ಯಾವಾಗಲೂ ಸರಿಯಾದ ವೈರ್ ನ್ನೇ ತುಂಡು ಮಾಡ್ತಾನೆ.

ಕನ್ನಡ ಫಿಲಮ್ ಗಳು ತಿಳಿಸುವ ಅಂಶಗಳು:-

೧. ಹೀರೋ ವಿಲನ್ ಗೆ ಹೊಡೆವಾಗಲೆಲ್ಲ "ಡಿಶುಂ" ಅನ್ನುವ ಶಬ್ದ ಬರುತ್ತೆ. ಪಿಸ್ತೂಲ್ ನಿಂದ ’ಡಿಶ್ಕ್ಯಾಂ’ ಅನ್ನುವ ಸದ್ದು ಬರುತ್ತೆ.
೨. ನೋಡೋಕೆ ಕೆಟ್ಟದಾಗಿರುವವರೆಲ್ಲ ವಿಲನ್ ಗಳಾಗಿರ್ತಾರೆ.
೩. ಹೀರೋ ಚಿತ್ರದಲ್ಲಿ ಮೆಕ್ಯಾನಿಕ್ ಪಾತ್ರ ಮಾಡುತ್ತಿದ್ದರೂ ರಸ್ತೆಯಲ್ಲಿ ಅವನು ದೊಡ್ಡ ’ಹೀರೋ’ ಎಂಬಂತೆ ಅಲ್ಲಿನ ಜನರು ಅವನತ್ತಲೇ ನೋಡ್ತಾ ಇರ್ತಾರೆ.
೪. ಹೀರೋಯಿನ್ ಗೆಳತಿ ಹೀರೋಯಿನ್ ಗಿಂತಲೂ ಚೆನ್ನಾಗಿದ್ರೂನೂ ಹೀರೋ ಗೆ ಹೀರೋಯಿನ್ ಮೇಲೆಯೇ ಮೊದಲ ನೋಟದ ಪ್ರೀತಿ ಹುಟ್ಟುತ್ತದೆ.

Wednesday, August 17, 2011

ಕಲೆ ಹಾಗೂ ಕಲಾವಿದ

ಕಲಾವಿದನ ರಹಸ್ಯ ದರ್ಶನ ಹಾಗೂ ನಿಸರ್ಗ ಹೊಸ ಆಕಾರ ಸೃಷ್ಟಿಗೆ ಒಪ್ಪಿಗೆ ಸೂಚಿಸಿದಾಗಲೇ ಹುಟ್ಟುವುದು ಕಲೆ! - ಖಲೀಲ್ ಗಿಬ್ರಾನ್

(ಈ ಕೆಳಗಿರುವ ಚಿತ್ರಗಳು ನನ್ನ ಇತ್ತೀಚೆಗಿನ ಅಡುಗೆ ಪ್ರಯೋಗದ ಫಲಿತಾಂಶಗಳು. ಅಪೂರ್ವ ಕಲಾಕೃತಿಗಳೆಂದು ಭಾಸವಾದರೆ ನಾನು ಜವಾಬ್ದಾರನಲ್ಲ !! )Wednesday, July 6, 2011

ಸಾಮಾನ್ಯ ಮನುಷ್ಯನ (common man) ನ ಅಸಾಮಾನ್ಯ ನಗೆಚಿತ್ರಗಳು!

ಆರ್.ಕೆ. ಲಕ್ಷ್ಮಣ್ ರ ಬೆಸ್ಟ್ ವ್ಯಂಗ್ಯಚಿತ್ರಗಳ ಸಂಗ್ರಹ; ಕಾಫಿ ಕ್ಲಬ್ಬಿನ ಮೆಂಬರುಗಳಿಗೆ...(ನೆನಪಿಡಿ, ವ್ಯಂಗ್ಯಚಿತ್ರಕಾರರಿಗೆ ಓದುಗರ ಮಂದಹಾಸವೇ ಚಪ್ಪಾಳೆ... ನಿಮ್ಮ ಮಂದಹಾಸ ಎಲ್ಲಾ ಹೇಳಲಿ!)Saturday, June 18, 2011

ಎಲ್ಲಕ್ಕೂ ರಸೀದಿ ಲಭ್ಯ
ಚಿತ್ರ: ಸುಪ್ರೀತ್.ಕೆ.ಎಸ್

Saturday, May 7, 2011

೨೦೧೧ ರ ಹೊಸ ಗಾದೆಗಳು..!
೧. ಆಳಾಗಿ ದುಡಿ; ಹಾಳಾಗಿ ಹೋಗು

೨. ಕೈ ಕೆಸರಾದರೆ ನಾನೇನು ಮಾಡಲಿ?

೩. ಉಪ್ಪು ತಿಂದ ಮೇಲೆ ಬೀಪಿ ಬರಲೇಬೇಕು

೪. ಕಾಲು ಇದ್ದಷ್ಟು ಹಾಸಿಗೆ ಹಾಸಿಕೋ

೫. ಆಕಳು ಕಪ್ಪಾದರೆ ಸಗಣಿನೂ ಕಪ್ಪೇ..

೬. ಜ್ಞಾನ ದೇಗುಲವಿದು, ಮೊಬೈಲ್ ಸ್ವಿಚ್ ಆಫ್ ಮಾಡಿ ಒಳಗೆ ಬನ್ನಿ

೭. ಏನಾದ್ರೂ ಮಾಡು; ಮೊದ್ಲು ಸ್ನಾನ ಮಾಡು

೮. ಕಬ್ಬು ಡೊಂಕಾದರೆ ತಿನ್ನೋದು ಬಿಡ್ತೇವ್ಯೇ?

೯. ಇಬ್ಬರ ಜಗಳ, ಮೂರನೆಯವನಿಗೆ ಪೆಟ್ಟು.

೧೦. ಹಣ್ತಿಂದವ ತಪ್ಪಿಸಿಕೊಂಡ; ಮೂತಿ ಒರೆಸ್ಕಂಡವ ಸಿಕ್ಕಾಕ್ಕೊಂಡ


೧೧. ಮನಸ್ಸೊಳಗೆ ಅನಾಚಾರ, ಮುಖದಲ್ ಬೃಂದಾವನ..

೧೨ ಗೆಳೆಯರ ಜಗಳ ಗುಂಡು ಹಾಕುವ ತನಕ..

೧೩ ವೈದ್ಯ ಬಯಸಿದ್ದೂ ಡಯಾಬಿಟೀಸು, ರೋಗಿಗಾಗಿದ್ದೂ ಡಯಾಬಿಟೀಸು..