Friday, February 6, 2009

ನಮ್ ಕಾಫಿ ಕ್ಲಬ್ ಕನ್ನಡ ಪ್ರಭಾದಲ್ಲಿ!


ನಮ್ ಕಾಫಿ ಕ್ಲಬ್ಬಿಗೆ ಮಂಗಳೂರಿನ ಪಬ್ಬಿಗೆ ಸಿಕ್ಕಷ್ಟು ಪ್ರಚಾರ ಸಿಕ್ಕಬೇಕು ಎಂಬುದು ನಮ್ಮ ದುರಾಸೆಯಲ್ಲ. ಕಾಫಿ ಕಂಪು ಹರಡಿದಷ್ಟೇ ನಿಶ್ಯಬ್ಧವಾಗಿ ಕ್ಲಬ್ಬಿನ ಮಾತೂ ಹರಡಬೇಕು ಅನ್ನೋದು ನಮ್ಮ ಆಸೆ. ಈ ಆಸೆ ಇಷ್ಟು ಬೇಗ ಪೂರ್ಣವಾಗುತ್ತೆ ಅಂತ ಗೊತ್ತಿದ್ರೆ ಕಾಣದ ದೇವರಿಗೆ ಕೈಮುಗಿಯುವ ಕಷ್ಟ ಇರ್ತಿರ್ಲಿಲ್ಲ.
ಕನ್ನಡದ ಬ್ಲಾಗುಗಳನ್ನು ಪರಿಚಯಿಸಿ ಪ್ರೋತ್ಸಾಹಿಸುತ್ತಿರುವ ಕನ್ನಡಪ್ರಭ, ಇದೀಗ ತಾನೆ ಕಣ್ತೆರೆಯುತ್ತಿರುವ
ನಮ್ ಕಾಫೀ ಕ್ಲಬ್ಬನ್ನೂ ಪರಿಚಯಿಸಿದೆ.

ಕನ್ನಡಪ್ರಭದಲ್ಲಿ ಕಾಫೀ ಕ್ಲಬ್ಬಿನ ಲೇಖನಕ್ಕೆ ಈ ಲಿಂಕ್ ಕ್ಲಿಕ್ಕಿಸಿ.
http://www.kannadaprabha.com/News.asp?Topic=114&Title=%86%DB%C7V%DB%BE%DA%DFy&ID=KPO20090204144139&nDate=


4 comments:

 1. ಅಭಿನಂದನೆಗಳು..

  ಜಲ್ದಿ ಕಾಫೀ ಕೊಡಿ...

  ರುಚಿ ನೋಡೋಣ..!

  ReplyDelete
 2. Yentha Idu Fontuu,
  Thalee Novuthaiddee,
  Yeshetella hoslu fontnaalli kannada baaree beka? matthuu Odubeekaa!!

  AAyooo Bagavantha!!

  ReplyDelete
 3. ಪ್ರಕಾಶ್ ಹೆಗಡೆಯವರ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಬಂದೆ. ನೋಡಿದರೆ ಕನ್ನಡಪ್ರಭದಲ್ಲಿ ಬಂದಿದೆ ಅಂತ ತಿಳಿಯಿತು....ಕನ್ನಡಪ್ರಭ ಕ್ಲಿಕ್ ಮಾಡಿದರೆ ಅದರಲ್ಲಿ ನನ್ನ ಬ್ಲಾಗ್ ಬಗ್ಗೆ ಸೆಪ್ಟಂಬರಿನಲ್ಲಿ ಬಂದಿರುವುದು ಗೊತ್ತಾಯ್ತು. ತುಂಬಾ ಖುಷಿಯಾಯ್ತು....ಥ್ಯಾಂಕ್ಸ್.....ನಿಮ್ಮ ಕಾಫಿ ಕ್ಲಬ್ ಗೆ ಮೊದಲ ಆಟೆಂಡೆನ್ಸ್ ನನ್ನದೆ....

  ReplyDelete
 4. ಸ್ರಿಸ್ ರವರೇ,
  ಫಾಂಟ್ ದೊಡ್ಡದಾಗಿ ಕಾಣಲು ಕಂಟ್ರೋಲ್ ಕೀ ಹಿಡಿದು ಮೌಸನ್ನು ಮೇಲಕ್ಕೆ ಸ್ಕ್ರಾಲ್ ಮಾಡಿ. ಅಥವಾ ’ವೀವ್’ ಗೆ ಹೋಗಿ ಜೂಮ್ ಮಾಡಬಹುದು. ಇದಕ್ಕೆಲ್ಲ ಏನು ಭಗವಂತರನ್ನ ಕರೆಯೋದು ಬೇಡ (ಅವ್ರಿಗೆ ಕಂಪ್ಯೂಟರು ಬತ್ತದಾ ಅಂತ ನನ್ ಡೌಟು :) )

  ReplyDelete

ಕಾಫಿ ಕುಡೀತಾ ಹಂಗೇ ಒಂದಿಷ್ಟು ಮಾತಾಡಿ