Sunday, April 4, 2010

ನಕ್ರೆ ಜೋಕೇ; ನಗದಿದ್ರೆ ಜೋಕೆ!ಹೆಂಡತಿ ಒಂದು ಬೋರ್ಡ್ ನೋಡಿದಳು. ನೋಡಿ ಆಕೆ ಹೃದಯ ಬಾಯಿಗೆ ಬಂದಿತ್ತು. ಸ್ವರ್ಗಕ್ಕೆ ಮೂರೇ ಫೀಟು. ಇಷ್ಟಕ್ಕೂ ಅದರಲ್ಲಿದ್ದಿದ್ದು " ಬನಾರಸಿ ಸೀರೆ : ೧೦ ರೂ,, ನೈಲಾನ್ ಸೀರೆ : ೮ ರೂಕಾಟನ್ ಸೀರೆ : ೫ ರೂ.

ರೀ ರೀ, ಒಂದೈದು ಸಾವ್ರ ಕೊಡ್ರಿ... ಒಂದಿಷ್ಟು ಸೀರೆ ಕೊಂಡ್ಕೋತೀನಿ.

ಸಾಮ್ರಾಟರು ತಲೆ ಚಚ್ಚಿಕೊಂಡು, "ಲೇ.. ಇಸ್ತ್ರಿ ಅಂಗಡಿ ಕಣೇ ಇದು!"

********

ಅಪ್ಪ : ಯಾಕೆ ಎಕ್ಸಾಮ್ ಗೆ ಹೋಗಿಲ್ಲ?
ಮಗ : ಪೇಪರ್ ಕಷ್ಟ ಇತ್ತಪ್ಪಾ!
ಅಪ್ಪ : ಅಲ್ಲ, ಎಕ್ಸಾಮ್ ಗೇ ಹೋಗದೇ ಅದ್ ಹ್ಯಾಗೆ ಕಷ್ಟ ಅಂತಿದ್ದೀ?
ಮಗ : ನಿನ್ನೆ ರಾತ್ರೀನೇ ಪ್ರಶ್ನೆಪತ್ರಿಕೆ ಲೀಕ್ ಆಗಿ ಸಿಕ್ಕಿತ್ತು..!

******

ಒಬ್ಬ ಜಿಪುಣಾಗ್ರೇಸರನಿಗೂ ನಗೆಸಾಮ್ರಾಟರಿಗೂ ಇರೋ ವ್ಯತ್ಯಾಸ ಏನು?

ಟ್ಯಾಕ್ಸಿ ಚಾಲಕ : ಸಾಹೇಬ್ರೇ, ಟ್ಯಾಕ್ಸಿ ದ್ದು ಬ್ರೇಕ್ ಫೇಲ್ ಆಗಿದೆ!

ಇದಕ್ಕೆ ಜಿಪುಣಾಗ್ರೇಸರ ನ ಮತ್ತು ಸಾಮ್ರಾಟರ ರಿಯಾಕ್ಷನ್ ನೋಡಾಣ.

ಸಾಮ್ರಾಟರು : ಪರ್ವಾಗಿಲ್ಲ ಬೇಜಾರ್ ಮಾಡ್ಕೋಬೇಡಯ್ಯ..ಬಿಡು, ಮುಂದಿನ ಸಲ ಖಂಡಿತಾ ಪಾಸ್ ಆಗುತ್ತೆ...
ಜಿಪುಣಾಗ್ರೇಸರ : ಬಡ್ಡಿ ಮಗನೇ, ಮೊದಲು ಮೀಟರ್ ಬಂದ್ ಮಾಡು!

**** **

ಒಮ್ಮೆ ಸಾಮ್ರಾಟರಿಗೆ ಕುಂದಾಪುರದಲ್ಲಿ ಆಕ್ಸಿಡೆಂಟ್ ಆಯ್ತು.

ಡಾಕ್ಟರು : ಸಾಮ್ರಾಟರೇ, ನಿಮ್ಗೆ ಸ್ಟಿಚ್ ಹಾಕ್ಬೇಕಾಗ್ತದೆ ಮಾರಾಯ್ರೇ...

ಸಾಮ್ರಾಟರು : ಎಷ್ಟ್ ಖರ್ಚ್ ಆತ್ತ್ ?

ಡಾಕ್ಟರು : ೮೦೦೦!

ಸಾಮ್ರಾಟರು : ಹ್ವಾಯ್, ಮಾಮೂಲಿ ಸ್ಟಿಚಸ್ ಹಾಕ್ರೆ ಸಾಕ್ ಮರ್ರೇ... ಎಂಬ್ರಾಯ್ಡರಿ ಎಂಥ ಬೇಡ..!


*****

ಆಸ್ಪತ್ರೆಯ ರೋಗಿಯೊಬ್ಬನಿಗೆ ಅಲ್ಲಿನ ನರ್ಸ್ ಮೇಲೆ ಪ್ರೀತಿ ಉಕ್ಕಿತು. ಹಳೇ ಕನ್ನಡ ಫಿಲಮ್ ಸ್ಟೈಲ್ ನಲ್ಲಿ “ ಐ ಲವ್ ಯೂ, ನೀನು ನನ್ನ ಹ್ರದಯ ಕದ್ದಿದ್ದಿ..” ಅಂಥ ಭಾವುಕನಾಗಿ ಅಂದಾಗ

ಹೆದರಿದ ನರ್ಸಮ್ಮ ಬಿಳಿಚಿಕೊಂಡ ಮೊಗದಿಂದ, “ಇಲ್ಲಾ ಇಲ್ಲ..ನಾವು ಕದ್ದಿದ್ದು ಬರೀ ಕಿಡ್ನಿ ಮಾತ್ರ!” ಅಂದಳು.

******

ಮಂತ್ರಿ : ಯುದ್ಧಕ್ಕೆ ಸಿದ್ಧರಾಗಿ ಅಂತ ಪಕ್ಕದ ರಾಜ್ಯದ ರಾಜ ಎಸ್ಸೆಮ್ಮೆಸ್ಸು ಕಳಿಸಿದ್ದಾನೆ, ಏನು ಮಾಡುವುದು ಮಹಾಪ್ರಭೂ?

ಪ್ರಭು : ಮೆಸ್ಸೇಜ್ ಸೆಂಡಿಂಗ್ ಫೈಲ್ಡ್ ಅಂತ ವಾಪಸ್ ಮೆಸ್ಸೇಜ್ ಕಳಿಸು!

******

(ಸಂಗ್ರಹ)

9 comments:

 1. ಚೆನ್ನಾಗಿದೆ ಸಾಮ್ರಾಟರೆ, ಕಾಪಿ ಹೀರಲು ಈ ಜೋಕುಗಳು ಸಾಕು,ಮತ್ತಷ್ಟು ಬರೆಯಿರಿ

  ReplyDelete
 2. ಚೆನ್ನಾಗಿವೆ, ಜೋಕುಗಳು :-D

  ReplyDelete
 3. ನಗದಿದ್ದರೆ ಜೋಕೆ ಎಂದು ಬೆದರಿಕೆ ಹಾಕುವ ಆವಶ್ಯಕತೆಯಿಲ್ಲದ ಜೋಕುಗಳಿವು. ನಮ್ಮ ಹೆಸರು ಅಜರಾಮರವಾಗಿಸಿದ್ದಕ್ಕೆ ಧನ್ಯವಾದಗಳು.
  -ನಗೆ ಸಾಮ್ರಾಟ್

  ReplyDelete
 4. ರಂಜಿತ್,

  ಮೊದಲನೆಯ ಜೋಕಿನಲ್ಲಿ ಅದು ಯಾರ ಹೆಂಡತಿ ಅನ್ನುವುದು ಸಸ್ಪೆನ್ಸ್ ಆಗೇ ಉಳಿಸಿದ್ದೀರಿ.

  ನಗೆ ಸಾಮ್ರಾಟರೇ, ನನ್ನ ಈ ಪ್ರಶ್ನೆಗೆ ನೀವಾದರೂ ಶೆರ್ಲಾಕ್ ಹೋಮ್ಸ್ ನ ಅವತಾರ ತಾಳಿ ಉತ್ತರ ಹುಡುಕಬೇಕಾಗಿ ವಿನಂತಿ!

  - ನಗದ ಮೊಗದವ.

  ReplyDelete
 5. ಸಾಮ್ರಾಟರ ಜೋಕು ಚೆನ್ನಾಗಿದೆ
  ನಕ್ಕ ನಕ್ಕ ಸುಸ್ತ್ ಮಾರಾಯ್ರೆ

  ReplyDelete
 6. ಟೈಟಲ್ಲೇ ಸಕ್ಕತ್ ಕಾಮಿಡಿಯಾಗಿದೆ ..

  ReplyDelete
 7. ಜೋಕ್ಸ್ ಚೆನ್ನಾಗಿದೆ... ಜಾಸ್ತಿ ನಗಸಬೇಡಿ. ನಕ್ಕು, ನಕ್ಕು ನಮಗೆ ಹೊಟ್ಟೆ ಹುನ್ನದರೆ ಏನ್ ಮಾಡೋದು

  ReplyDelete
 8. ನಗೆಯುಕ್ಕಿಸುವ ಜೋಕುಗಳು...
  ನಿಜಕ್ಕೂ ಚೆನ್ನಾಗಿದೆರೀ..
  ಬರೀತಿರಿ ಇದೇ ರೀತಿ..ನಗ್ತಿರ್ತೀವಿ ನಾವೆಲ್ಲಾ...

  ReplyDelete

ಕಾಫಿ ಕುಡೀತಾ ಹಂಗೇ ಒಂದಿಷ್ಟು ಮಾತಾಡಿ