ಡಾಕ್ಟರ್ : ನೀವು ಯಾವ ಸೋಪ್ ಬಳಸುವುದು?
ಸಾಮ್ರಾಟ್ : ನಾನು ಗೋಪಾಲ್ ಸೋಪ್. ಹಲ್ಲುಜ್ಜಲು ಕೂಡ ಗೋಪಾಲ್ ಟೂತ್ ಪೇಸ್ಟ್, ಗೋಪಾಲ್ ಬ್ರಶ್!
ಡಾಕ್ಟರ್ : ಈ "ಗೋಪಾಲ್" ಅಂದ್ರೆ ಇಂಟರ್ನ್ಯಾಶನಲ್ ಕಂಪನಿನಾ?
ಸಾಮ್ರಾಟ್ : ಅಲ್ಲ ಅಲ್ಲ.. ಗೋಪಾಲ್ ನನ್ನ ರೂಮ್ ಮೇಟ್!
************
ಅವತ್ತು ಸಾಮ್ರಾಟರು ಫುಲ್ ಟೈಟ್...
ಇನ್ನು ನಡೆಯಲು ಆಗಲ್ಲ ಅನ್ನಿಸಲು ಶುರುವಾದಾಗ ಅಲ್ಲೇ ನಿಂತಿದ್ದ ಟ್ಯಾಕ್ಸಿ ಹತ್ತಿ ಕೂತು..." ಏರ್ ಪೋರ್ಟ್ ಗೆ ಹೊರಡಪ್ಪಾ.." ಅಂದರು.
ಟ್ಯಾಕ್ಸಿಯವನು "ಸ್ವಾಮೀ.. ನೀವು ಏರ್ ಪೋರ್ಟಿನಲ್ಲೇ ಇದೀರಿ!"
ಅಂದ.
ಸಾಮ್ರಾಟರು ಜೇಬಿನಿಂದ ಒಂದೈವತ್ತು ರೂಪಾಯಿ ತೆಗೆದು ಅವನಿಗಿತ್ತು,.." ತಗೋಳಪ್ಪಾ.. ಆದ್ರೆ ಇನ್ಮೇಲೆ ಇಷ್ಟ್ ಫಾಸ್ಟ್ ಆಗಿ ಕಾರ್ ಓಡಿಸ್ಬೇಡ!" ಅಂದರು.
******
ಸಾಮ್ರಾಟ್ ಮನೆಯಲ್ಲಿ ಅಂದು ಪ್ಲಗ್ ನಿಂದ ಹೊಗೆ ಬರ್ತಿತ್ತು.
ಸಿಟ್ಟು ತೀರಾ ನೆತ್ತಿಗೇರಿ ಕೆ.ಪಿ.ಟಿ.ಸಿ.ಎಲ್ ಗೆ ಫೋನ್ ಮಾಡಿ..."ಯಾರ್ರೀ ಅದು ಆಫೀಸಿನಲ್ಲಿ ಸಿಗರೇಟ್ ಸೇದಿ, ನಮ್ಮನೆ ಪ್ಲಗ್ ನಲ್ಲಿ ಬಿಡ್ತಾ ಇರೋದು?!" ಅಂತ ಬೈದರು!
*****
ಇದು ಸಾಮ್ರಾಟರು ಹೆಣ್ಣು ನೋಡಲು ಹೋದಾಗ ನಡೆದಿದ್ದು.
ಒಂದೇ ಲುಕ್ಕಿನಲ್ಲಿ ಸಾಮ್ರಾಟರ ಬದುಕನ್ನಿಡೀ ಅಳೆದ ಹುಡುಗಿಯ ಅಪ್ಪ, " ನನ್ನ ಮಗಳನ್ನು ಅವಳ ಬಾಳ ತುಂಬಾ ಒಬ್ಬ ಈಡಿಯಟ್ ಜತೆ ಇರಿಸಿಸೋದಕ್ಕೆ ನಂಗೆ ಇಷ್ಟ ಇಲ್ಲ!" ಅಂದುಬಿಟ್ಟರು.
ಸಾಮ್ರಾಟರು ಕೂಲ್ ಆಗಿ, " ಇದೇ ಕಾರಣಕ್ಕಾಗಿ ನಾನು ನಿಮ್ಮ ಮಗಳನ್ನು ಮದುವೆಗಾಗಿ ಕೇಳೋಕೆ ಬಂದಿರುವುದು!" ಎಂದರು.
*******
ಸಾಮ್ರಾಟರು ರಿಸೆಶನ್ ನಿಂದ ನರಳುತಿರುವಾಗಲೇ ಮಗ ಜಿಂಗ್ ಜಾಂಗ್ ಆಗಿ ಸಮಸ್ಯೆಯ ಪರಿತಾಪವೇ ಇಲ್ಲದೇ ಓಡಾಡುತ್ತಿದ್ದ. ಅದಾದರೆ ಹೋಗಲಿ, ವಯಸ್ಸು, ಆಡಿಕೊಳ್ಳಲಿ ಅಂತ ಸುಮ್ಮನಿರಬಹುದಿತ್ತು.
ಇಂಥಾ ಟೈಮಿನಲ್ಲಿ ಮಗ "ನಂಗೊಂದು ಬೈಕ್ ಕೊಡಿಸು" ಅಂತ ದುಂಬಾಲು ಬಿದ್ದ.
ಸಾಮ್ರಾಟರ ಪಿತ್ತ ನೆತ್ತಿಗೇರಿ, " ದೇವ್ರು ನಿಂಗೆ ೨ ಕಾಲ್ ಕೊಟ್ಟಿರೋದು ಯಾತಕ್ಕೆ?!" ಅಂತ ಕೇಳಿದರೆ ಮಗ "ಒಂದು ಗೇರ್ ಹಾಕೋಕೆ, ಮತ್ತೊಂದು ಬ್ರೇಕ್ ಹಾಕೋಕೆ!" ಅಂದುಬಿಡೋದೇ?!
******
(ಸಂಗ್ರಹ)
ಹಹಹ.. ಸಾಮ್ರಾಟರು ಯಾಕೋ ಸಂತಾ ಸಿಂಗನಿಗೆ ಒಳ್ಳೆ ಕಾಂಪಿಟೀಶನ್ ಕೊಡೊ ಹಾಗಿದೆ..
ReplyDeleteಚೆನ್ನಾಗಿವೆ. ಹೆಚ್ಚಿನವು ಎಸ್-ಎಮ್-ಎಸ್ ನಲ್ಲಿ ಹರಿದಾಡಿದ್ದು. ಸ೦ಗ್ರಹಕ್ಕೆ ಅಭಿನ೦ದನೆ.
ReplyDeleteಹಳೆದರ ಜೊತೆ ಹೊಸದೂ ಇದ್ದರೆ ಚೆಂದ ಅಲ್ವ ಸರ್ ?
ReplyDeleteತುಂಬಾ ಸೊಗಸಾಗಿದೆ
ReplyDelete