Saturday, September 26, 2009

ಗೇಟ್ಸ್ ಗೆ ಸಾಮ್ರಾಟರು ಬರೆದ ಪತ್ರ!

ಮಾನ್ಯ ಬಿಲ್ ಗೇಟ್ಸ್,

ನಮ್ಮನೇಗೆ ಒಂದು ಕಂಪ್ಯೂಟರ್ ತಗೊಂಡಿದ್ದು, ಅದರಲ್ಲಿ ಕೆಲ ಸಮಸ್ಯೆಗಳು ಉದ್ಭವಿಸಿದೆ. ಅದನ್ನು ನಿಮಗೆ ತಿಳಿಸಲು ಬಯಸುತ್ತೇನೆ.

೧. ನಿಮ್ಮ ಕಂಪ್ಯೂಟರ್ ಚೆನ್ನಾಗಿದೆ, ಆದರೆ ಅದರಲ್ಲಿ "ಸ್ಟಾರ್ಟ್" ಬಟನ್ ಇದೆ, "ಸ್ಟಾಪ್" ಬಟನ್ ಇಲ್ವೇ ಇಲ್ಲ. ಇದರ ಕುರಿತು ವಿಚಾರ ಮಾಡುವಂತೆ ನಿಮ್ಮಲ್ಲಿ ವಿನಂತಿ.

೨.ನಿಮ್ಮಲ್ಲಿ "ರಿ-ಸ್ಕೂಟರ್" ಸಿಗುತ್ತದಾ? ಕಂಪ್ಯೂಟರ್ ನಲ್ಲಿ "ರಿ-ಸೈಕಲ್" ಅಂತಿದೆ. ನನ್ನ ಬಳಿ ಸ್ಕೂಟರ್ ಇದೆ, ಸೈಕಲ್ ಇಲ್ಲ!

೩. ನನ್ನ ಮಗ ಪಿಂಟೂ ಗೆ ಈಗ ೬ ವರ್ಷ. ಮೊದಲು ನಿಮ್ಮ "ಮೈಕ್ರೋ ಸಾಫ್ಟ್ ವರ್ಡ್" ನೋಡ್ತಿದ್ದ, ಈಗ ಆತ "ಮೈಕ್ರೋ ಸಾಫ್ಟ್ ಸೆಂಟೆನ್ಸ್" ಬೇಕನ್ನುತ್ತಿದ್ದಾನೆ. ದಯವಿಟ್ಟು ಕೊಡ್ತೀರಾ?

೪. ನಿಮ್ಮ ವಿಂಡೋವ್ಸ್ ನಲ್ಲಿ "ಮೈ ಪಿಕ್ಚರ್ಸ್" ಅನ್ನುವ ಫೋಲ್ಡರ್ ಇದೆ. ಆದರೆ ಅದರಲ್ಲಿ ನನ್ನ ಒಂದೂ ಫೋಟೋ ಇಲ್ಲದಿರುವುದು ಬೇಸರ ತಂದಿದೆ. ಇದರತ್ತ ಕೊಂಚ ಗಮನ ಹರಿಸಿ.

೫. ನಾನು ಕಂಪ್ಯೂಟರ್ ಕೊಂಡುಕೊಂಡಿದ್ದು ಮನೆಯಲ್ಲಿ ಬಳಸುವುದಕ್ಕೆ. ನಿಮ್ಮ ಸಾಫ್ಟ್ ವೇರ್ "ಮೈಕ್ರೋ ಸಾಫ್ಟ್ ಆಫೀಸ್" ಅಂತಿದೆ. "ಮೈಕ್ರೋ ಸಾಫ್ಟ್ ಹೋಂ" ನ್ನು ದಯವಿಟ್ಟು ನನಗೆ ನೀಡಿ.

ಹಾಗೆ ಕೊನೆಯದಾಗಿ ಒಂದು ಅನುಮಾನವಿದೆ ಸರ್. ನಿಮ್ಮ ಹೆಸರು "ಗೇಟ್ಸ್" ಆದರೂ ನೀವ್ಯಾಕೆ "ವಿಂಡೋವ್ಸ್"ನ ಮಾರುತ್ತಿದ್ದೀರಿ?

(ಈ-ಮೈಲ್ ಬ್ಯೂರೋ ಮೂಲದಿಂದ)

--

3 comments:

  1. ಒಳ್ಳೇ ಕಥೆಯಾಯ್ತು ನಿಮ್ಮದು!!! ಹಾ ಹಾ

    ReplyDelete
  2. ಸೂಪರ್ ಕಣ್ರೀ .......ಗೇಟ್ಸ್ ಗೆ ಈ ಪ್ರಶ್ನೆಗಳನ್ನು ನೋಡಿ ತಲೆ ಕೆಟ್ಟು ಹೋಗದಿದ್ದರೆ ಹೇಳಿ......

    ReplyDelete
  3. ಪಿಂಟೋ ಎಂಬ ಆರು ವರ್ಷದ ಮಗ ನಮಗಿದ್ದಾನೆ ಎಂಬ ಮಾಹಿತಿ ಹೊಸತು. ತಿಳಿಸಿಕೊಟ್ಟದ್ದಕ್ಕಾಗಿ ತಮಗೆ ನಾವು ಋಣಿ.

    - ನಗೆ ಸಾಮ್ರಾಟ್

    ReplyDelete

ಕಾಫಿ ಕುಡೀತಾ ಹಂಗೇ ಒಂದಿಷ್ಟು ಮಾತಾಡಿ