Showing posts with label ಹಾಸ್ಯ. Show all posts
Showing posts with label ಹಾಸ್ಯ. Show all posts

Sunday, April 4, 2010

ನಕ್ರೆ ಜೋಕೇ; ನಗದಿದ್ರೆ ಜೋಕೆ!



ಹೆಂಡತಿ ಒಂದು ಬೋರ್ಡ್ ನೋಡಿದಳು. ನೋಡಿ ಆಕೆ ಹೃದಯ ಬಾಯಿಗೆ ಬಂದಿತ್ತು. ಸ್ವರ್ಗಕ್ಕೆ ಮೂರೇ ಫೀಟು. ಇಷ್ಟಕ್ಕೂ ಅದರಲ್ಲಿದ್ದಿದ್ದು " ಬನಾರಸಿ ಸೀರೆ : ೧೦ ರೂ,, ನೈಲಾನ್ ಸೀರೆ : ೮ ರೂಕಾಟನ್ ಸೀರೆ : ೫ ರೂ.

ರೀ ರೀ, ಒಂದೈದು ಸಾವ್ರ ಕೊಡ್ರಿ... ಒಂದಿಷ್ಟು ಸೀರೆ ಕೊಂಡ್ಕೋತೀನಿ.

ಸಾಮ್ರಾಟರು ತಲೆ ಚಚ್ಚಿಕೊಂಡು, "ಲೇ.. ಇಸ್ತ್ರಿ ಅಂಗಡಿ ಕಣೇ ಇದು!"

********

ಅಪ್ಪ : ಯಾಕೆ ಎಕ್ಸಾಮ್ ಗೆ ಹೋಗಿಲ್ಲ?
ಮಗ : ಪೇಪರ್ ಕಷ್ಟ ಇತ್ತಪ್ಪಾ!
ಅಪ್ಪ : ಅಲ್ಲ, ಎಕ್ಸಾಮ್ ಗೇ ಹೋಗದೇ ಅದ್ ಹ್ಯಾಗೆ ಕಷ್ಟ ಅಂತಿದ್ದೀ?
ಮಗ : ನಿನ್ನೆ ರಾತ್ರೀನೇ ಪ್ರಶ್ನೆಪತ್ರಿಕೆ ಲೀಕ್ ಆಗಿ ಸಿಕ್ಕಿತ್ತು..!

******

ಒಬ್ಬ ಜಿಪುಣಾಗ್ರೇಸರನಿಗೂ ನಗೆಸಾಮ್ರಾಟರಿಗೂ ಇರೋ ವ್ಯತ್ಯಾಸ ಏನು?

ಟ್ಯಾಕ್ಸಿ ಚಾಲಕ : ಸಾಹೇಬ್ರೇ, ಟ್ಯಾಕ್ಸಿ ದ್ದು ಬ್ರೇಕ್ ಫೇಲ್ ಆಗಿದೆ!

ಇದಕ್ಕೆ ಜಿಪುಣಾಗ್ರೇಸರ ನ ಮತ್ತು ಸಾಮ್ರಾಟರ ರಿಯಾಕ್ಷನ್ ನೋಡಾಣ.

ಸಾಮ್ರಾಟರು : ಪರ್ವಾಗಿಲ್ಲ ಬೇಜಾರ್ ಮಾಡ್ಕೋಬೇಡಯ್ಯ..ಬಿಡು, ಮುಂದಿನ ಸಲ ಖಂಡಿತಾ ಪಾಸ್ ಆಗುತ್ತೆ...
ಜಿಪುಣಾಗ್ರೇಸರ : ಬಡ್ಡಿ ಮಗನೇ, ಮೊದಲು ಮೀಟರ್ ಬಂದ್ ಮಾಡು!

**** **

ಒಮ್ಮೆ ಸಾಮ್ರಾಟರಿಗೆ ಕುಂದಾಪುರದಲ್ಲಿ ಆಕ್ಸಿಡೆಂಟ್ ಆಯ್ತು.

ಡಾಕ್ಟರು : ಸಾಮ್ರಾಟರೇ, ನಿಮ್ಗೆ ಸ್ಟಿಚ್ ಹಾಕ್ಬೇಕಾಗ್ತದೆ ಮಾರಾಯ್ರೇ...

ಸಾಮ್ರಾಟರು : ಎಷ್ಟ್ ಖರ್ಚ್ ಆತ್ತ್ ?

ಡಾಕ್ಟರು : ೮೦೦೦!

ಸಾಮ್ರಾಟರು : ಹ್ವಾಯ್, ಮಾಮೂಲಿ ಸ್ಟಿಚಸ್ ಹಾಕ್ರೆ ಸಾಕ್ ಮರ್ರೇ... ಎಂಬ್ರಾಯ್ಡರಿ ಎಂಥ ಬೇಡ..!


*****

ಆಸ್ಪತ್ರೆಯ ರೋಗಿಯೊಬ್ಬನಿಗೆ ಅಲ್ಲಿನ ನರ್ಸ್ ಮೇಲೆ ಪ್ರೀತಿ ಉಕ್ಕಿತು. ಹಳೇ ಕನ್ನಡ ಫಿಲಮ್ ಸ್ಟೈಲ್ ನಲ್ಲಿ “ ಐ ಲವ್ ಯೂ, ನೀನು ನನ್ನ ಹ್ರದಯ ಕದ್ದಿದ್ದಿ..” ಅಂಥ ಭಾವುಕನಾಗಿ ಅಂದಾಗ

ಹೆದರಿದ ನರ್ಸಮ್ಮ ಬಿಳಿಚಿಕೊಂಡ ಮೊಗದಿಂದ, “ಇಲ್ಲಾ ಇಲ್ಲ..ನಾವು ಕದ್ದಿದ್ದು ಬರೀ ಕಿಡ್ನಿ ಮಾತ್ರ!” ಅಂದಳು.

******

ಮಂತ್ರಿ : ಯುದ್ಧಕ್ಕೆ ಸಿದ್ಧರಾಗಿ ಅಂತ ಪಕ್ಕದ ರಾಜ್ಯದ ರಾಜ ಎಸ್ಸೆಮ್ಮೆಸ್ಸು ಕಳಿಸಿದ್ದಾನೆ, ಏನು ಮಾಡುವುದು ಮಹಾಪ್ರಭೂ?

ಪ್ರಭು : ಮೆಸ್ಸೇಜ್ ಸೆಂಡಿಂಗ್ ಫೈಲ್ಡ್ ಅಂತ ವಾಪಸ್ ಮೆಸ್ಸೇಜ್ ಕಳಿಸು!

******

(ಸಂಗ್ರಹ)

Thursday, December 3, 2009

ಒಂದು ಗೇರ್ ಹಾಕೋಕೆ, ಮತ್ತೊಂದು ಬ್ರೇಕ್ ಹಾಕೋಕೆ!

ಡಾಕ್ಟರ್ : ನೀವು ಯಾವ ಸೋಪ್ ಬಳಸುವುದು?

ಸಾಮ್ರಾಟ್ : ನಾನು ಗೋಪಾಲ್ ಸೋಪ್. ಹಲ್ಲುಜ್ಜಲು ಕೂಡ ಗೋಪಾಲ್ ಟೂತ್ ಪೇಸ್ಟ್, ಗೋಪಾಲ್ ಬ್ರಶ್!

ಡಾಕ್ಟರ್ : ಈ "ಗೋಪಾಲ್" ಅಂದ್ರೆ ಇಂಟರ್ನ್ಯಾಶನಲ್ ಕಂಪನಿನಾ?

ಸಾಮ್ರಾಟ್ : ಅಲ್ಲ ಅಲ್ಲ.. ಗೋಪಾಲ್ ನನ್ನ ರೂಮ್ ಮೇಟ್!

************

ಅವತ್ತು ಸಾಮ್ರಾಟರು ಫುಲ್ ಟೈಟ್...

ಇನ್ನು ನಡೆಯಲು ಆಗಲ್ಲ ಅನ್ನಿಸಲು ಶುರುವಾದಾಗ ಅಲ್ಲೇ ನಿಂತಿದ್ದ ಟ್ಯಾಕ್ಸಿ ಹತ್ತಿ ಕೂತು..." ಏರ್ ಪೋರ್ಟ್ ಗೆ ಹೊರಡಪ್ಪಾ.." ಅಂದರು.

ಟ್ಯಾಕ್ಸಿಯವನು "ಸ್ವಾಮೀ.. ನೀವು ಏರ್ ಪೋರ್ಟಿನಲ್ಲೇ ಇದೀರಿ!"
ಅಂದ.

ಸಾಮ್ರಾಟರು ಜೇಬಿನಿಂದ ಒಂದೈವತ್ತು ರೂಪಾಯಿ ತೆಗೆದು ಅವನಿಗಿತ್ತು,.." ತಗೋಳಪ್ಪಾ.. ಆದ್ರೆ ಇನ್ಮೇಲೆ ಇಷ್ಟ್ ಫಾಸ್ಟ್ ಆಗಿ ಕಾರ್ ಓಡಿಸ್ಬೇಡ!" ಅಂದರು.

******

ಸಾಮ್ರಾಟ್ ಮನೆಯಲ್ಲಿ ಅಂದು ಪ್ಲಗ್ ನಿಂದ ಹೊಗೆ ಬರ್ತಿತ್ತು.

ಸಿಟ್ಟು ತೀರಾ ನೆತ್ತಿಗೇರಿ ಕೆ.ಪಿ.ಟಿ.ಸಿ.ಎಲ್ ಗೆ ಫೋನ್ ಮಾಡಿ..."ಯಾರ್ರೀ ಅದು ಆಫೀಸಿನಲ್ಲಿ ಸಿಗರೇಟ್ ಸೇದಿ, ನಮ್ಮನೆ ಪ್ಲಗ್ ನಲ್ಲಿ ಬಿಡ್ತಾ ಇರೋದು?!" ಅಂತ ಬೈದರು!

*****

ಇದು ಸಾಮ್ರಾಟರು ಹೆಣ್ಣು ನೋಡಲು ಹೋದಾಗ ನಡೆದಿದ್ದು.

ಒಂದೇ ಲುಕ್ಕಿನಲ್ಲಿ ಸಾಮ್ರಾಟರ ಬದುಕನ್ನಿಡೀ ಅಳೆದ ಹುಡುಗಿಯ ಅಪ್ಪ, " ನನ್ನ ಮಗಳನ್ನು ಅವಳ ಬಾಳ ತುಂಬಾ ಒಬ್ಬ ಈಡಿಯಟ್ ಜತೆ ಇರಿಸಿಸೋದಕ್ಕೆ ನಂಗೆ ಇಷ್ಟ ಇಲ್ಲ!" ಅಂದುಬಿಟ್ಟರು.

ಸಾಮ್ರಾಟರು ಕೂಲ್ ಆಗಿ, " ಇದೇ ಕಾರಣಕ್ಕಾಗಿ ನಾನು ನಿಮ್ಮ ಮಗಳನ್ನು ಮದುವೆಗಾಗಿ ಕೇಳೋಕೆ ಬಂದಿರುವುದು!" ಎಂದರು.

*******

ಸಾಮ್ರಾಟರು ರಿಸೆಶನ್ ನಿಂದ ನರಳುತಿರುವಾಗಲೇ ಮಗ ಜಿಂಗ್ ಜಾಂಗ್ ಆಗಿ ಸಮಸ್ಯೆಯ ಪರಿತಾಪವೇ ಇಲ್ಲದೇ ಓಡಾಡುತ್ತಿದ್ದ. ಅದಾದರೆ ಹೋಗಲಿ, ವಯಸ್ಸು, ಆಡಿಕೊಳ್ಳಲಿ ಅಂತ ಸುಮ್ಮನಿರಬಹುದಿತ್ತು.
ಇಂಥಾ ಟೈಮಿನಲ್ಲಿ ಮಗ "ನಂಗೊಂದು ಬೈಕ್ ಕೊಡಿಸು" ಅಂತ ದುಂಬಾಲು ಬಿದ್ದ.

ಸಾಮ್ರಾಟರ ಪಿತ್ತ ನೆತ್ತಿಗೇರಿ, " ದೇವ್ರು ನಿಂಗೆ ೨ ಕಾಲ್ ಕೊಟ್ಟಿರೋದು ಯಾತಕ್ಕೆ?!" ಅಂತ ಕೇಳಿದರೆ ಮಗ "ಒಂದು ಗೇರ್ ಹಾಕೋಕೆ, ಮತ್ತೊಂದು ಬ್ರೇಕ್ ಹಾಕೋಕೆ!" ಅಂದುಬಿಡೋದೇ?!

******

(ಸಂಗ್ರಹ)

Wednesday, September 23, 2009

ಸರಿ, ಮಕ್ಕಳೆಷ್ಟು!

ಮನೆಮನೆಗೆ ತೆರಳಿ ಜನಗಣತಿ ಮಾಡುವಾಕೆಗೆ ಆಕೆಯೊಬ್ಬಳು ಎದುರಾದಳು.

“ಮೇಡಂ ಜನಗಣತಿಗೆ ನಿಮ್ಮ ವಿವರವನ್ನು ಸೇರಿಸಿಕೊಳ್ಳಬೇಕಿತ್ತು.”

“ಏನು ಬೇಕಿತ್ತು ಕೇಳಿ...”

“ನಿಮ್ಮ ಹೆಸರು?”

“ಸಿಸ್ಟರ್ ಇಸಾಬೆಲ್”

“ಮದುವೆಯಾಗಿದೆಯಾ?”

ತುಸು ಯೋಚಿಸಿ ಆ ನನ್ ಉತ್ತರಿಸಿದಳು, “ಹು, ಜೀಸಸ್‌ನೊಂದಿಗೆ”

ಜನಗಣತಿಯಾಕೆ ಯಾಂತ್ರಿಕವಾಗಿ ಪ್ರಶ್ನಿಸಿದಳು, “ಸರಿ, ಎಷ್ಟು ಮಕ್ಕಳು?”

ಸಿಸ್ಟರ್ ಆಸ್ಪತ್ರೆಯ ಸಿಸ್ಟರ್‌ನ ಭೇಟಿ ಮಾಡುವವರೆಗೂ ಎಚ್ಚರವಾಗಲಿಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕೆ?

Saturday, May 9, 2009

ನೀವು ನಕ್ಕರೆ.. ಕಾಫಿಗೆ ಬೇಡ ಸಕ್ಕರೆ!

ನಗೆಸಾಮ್ರಾಟರು ಹೆಂಡತಿಗೆ ಫೋನ್ ಮಾಡಿದರು,"ಇವತ್ತು ಮನೆಗೆ ಬರಲಿಕ್ಕೆ ಆಗಲ್ಲ, ಕಾರಿನ ಗೇರ್, ಸ್ಟೀರಿಂಗ್ ಎಲ್ಲಾ ಕಳವಾಗಿದೆ.." ಎಂದು.

ಆದರೆ ಐದು ನಿಮಿಷದ ಬಳಿಕ ಮತ್ತೆ ಫೋನ್ ಮಾಡಿ.."ಬರ್ತಿದ್ದೇನೆ, ಮೊದಲು ಮಿಸ್ಸಾಗಿ ಕಾರಿನ ಹಿಂದಿನ ಸೀಟ್ ನಲ್ಲಿ ಕುಳಿತುಬಿಟ್ಟಿದ್ದೆ.." ಅಂದರು.

******


ಸರ್: ಯಾಕ್ಲೇ ಗುಂಡಾ..ಮುಂದ ಇನ್ ಶರ್ಟ್ ಮಾಡಿ ಹಿಂದಾ ಹೊರಗಾ ಬಿಟ್ಟಿದೀಯಲ್ಲಾ?

ಗುಂಡ: "ಮುಂದ ಅಂಗಿ ಹರ್ದೆತ್ರಿ... ಹಿಂದ ಪ್ಯಾಂಟ್ ಹರ್ದೆತ್ರಿ.. ಅದಕ್ಕೆ ರಿ ಸರ..."


*****

ರಿಸೆಷನ್ ಟೈಮ್ ನಲ್ಲಿ ಕಂಪನಿಯೊಂದು ಬಳಸಬಹುದಾದ ತಂತ್ರ.
ಟಿಶ್ಯೂ ಪೇಪರ್ ನ ಬದಲು ಹೊಸತಾಗಿ ಕಾಲೇಜು ಮುಗಿಸಿದವರು ಕೆಲಸಕ್ಕಾಗಿ ನೀಡಿದ ರೆಸ್ಯೂಮ್ ಬಳಸುವುದು!


*********

ನಗೆಸಾಮ್ರಾಟರು ಸಲೂನ್ ಗೆ ಹೋದಾಗ ನಡೆದ ಘಟನೆ.
ಅಲ್ಲಿಗೆ ಒಬ್ಬ ನೋಡಲು ಒಂದು ಆಂಗಲ್ ನಲ್ಲಿ ಗಾಂಧಿಯಂತೆ ಕಾಣುತ್ತಿದ್ದ ವ್ಯಕ್ತಿ ಬಂದ ತಲೆಯಲ್ಲಿ ಯಾವ ಕಡೆಯಿಂದ ಕೂಡಿಸಿದರೂ ಒಂಭತ್ತಕ್ಕಿಂತ ಹೆಚ್ಚು ಕೂದಲು ಕಾಣ್ತಿಲ್ಲ. ಅವನ ತಲೆ ನೋಡಿ ಸಿಟ್ಟಾದ ಸಲೂನಿನ ಬಿಲ್ಲು, " ಏನ್ಸಾರ್ ಕೌಂಟ್ ಮಾಡಲಾ? ಕಟ್ ಮಾಡಲಾ?" ಎಂದು ಕೇಳಿದ್ದಕ್ಕೆ

ಆ ವ್ಯಕ್ತಿ ವಿನಮ್ರತೆಯಿಂದ.."ಕಲರ್ ಮಾಡು.." ಅಂದ!
ನೋಡಿ ಸಾಮ್ರಾಟರು ಸುಸ್ತು.


******


ಸಾಮ್ರಾಟರ ಮಗನಿಗೆ ಶಾಲೆಯಲಿ ರೇಸ್ ಬಗ್ಗೆ ಬರೆಯಲು ಹೇಳಿದ್ದರು. ಅದನ್ನು ಒಂಚೂರೂ ಎಡಿಟ್ ಮಾಡದೇ ಇಲ್ಲಿ ನೀಡುತ್ತಿದ್ದೇವೆ.
"ಅದು ಇರುವೆಗಳ ಸೈಕಲ್ ರೇಸು. ಕುಂದಾಪುರದಿಂದ ಶುರುವಾದ ರೇಸು ಮುಗಿಯುವುದು ಉಡುಪಿಯಲಿ. ಒಂದು ಇರುವೆಯು ಇಲ್ಲದ ಗೇರನ್ನು ಕಲ್ಪಿಸಿಕೊಳ್ಳುತ್ತ ಸೈಕಲ್ ನ್ನು ಪಲ್ಸಾರ್ ತರಹ ಓಡಿಸುತ್ತಿತ್ತು. ಆಗ ಅಲ್ಲಿಗೆ ಸೈಟ್ ಸೀಯಿಂಗ್ ಗೆ ಬಂದ ಆನೆ ದಾರಿಗಡ್ಡವಾದಾಗ ಸಡನ್ನಾಗಿ ಬ್ರೇಕ್ ಹಾಕಿದ ಇರುವೆಯು .." ಅಡಿಕ್ ಬೂರ್ದು ಸೈಪನ ಮರೆ..!" (ಅಡಿಗೆ ಬಿದ್ದು ಸಾಯ್ತೀಯ ಮಾರಾಯ) ಅಂದಿತು.

ಮಗನ ಕಲ್ಪನೆಗಳ ಬಗ್ಗೆ ಹೆಮ್ಮೆ ಪಟ್ಟ ಸಾಮ್ರಾಟರು ಎಲ್ಲೆಡೆ ಹೇಳಿಕೊಂಡು ತಿರುಗುತ್ತಿದ್ದರೆ, ಮಗರಾಯ ’ಅಪ್ಪ ಹೀಗೆ ಹೇಳ್ತಾ ಇದ್ದರೆ ಆನೆ ಮರ್ಯಾದೆ ಏನಾಗಬೇಕಂತ’ ಆಲೋಚಿಸಿ ಆನೆಯನ್ನೇ ಹೀರೋ ಆಗಿಸಿ ಏನೋ ಬರೆಯುತ್ತಿದ್ದಾನಂತೆ!

*****

ಈ ಸಲ ಇಂಕ್ರಿಮೆಂಟು ನೀಡದ್ದಕ್ಕೆ ಸಿಟ್ಟಾದ ನಗೆಸಾಮ್ರಾಟರು ತನ್ನ ಬಾಸ್ ಗೆ ಧಮಕಿ ಹಾಕಿದ್ದು ಹೇಗೆ ಗೊತ್ತೆ?
" ಈ ತಿಂಗಳು ನನ್ನ ಸಂಬಳ ಹೆಚ್ಚು ಮಾಡದಿದ್ದರೆ, ಆಫೀಸಿನ ಎಲ್ಲರಿಗೂ ನೀವು ನನಗೆ ಇಂಕ್ರಿಮೆಂಟ್ ಕೊಟ್ಟಿರೆಂದು ಸುದ್ಧಿ ಹಬ್ಬಿಸುತ್ತೇನೆ..!"

*****

ಕಳೆದ ಸಲ ನಗೆ ಸಾಮ್ರಾಟರು ಅಮೇರಿಕಾಗೆ ಹೋಗಿದ್ದಾಗ ಅಲ್ಲೊಂದು ಮೆಶೀನ್ ನೋಡಿದರು. ಅದು ಕಳ್ಳರನ್ನು ಹಿಡಿವ ಯಂತ್ರವಾಗಿತ್ತು. ಅಲ್ಲೇ ಸಾಕ್ಷಾತ್ ಅವರ ಕಣ್ಣೆದುರೇ ಘಂಟೆ ೧೦ ಲೆಕ್ಕದಲ್ಲಿ ಕಳ್ಳರನ್ನು ಹಿಡಿಯಿತು. ಖುಷ್ ಆದ ಸಾಮ್ರಾಟರು ಭಾರಿ ಮೊತ್ತ ತೆತ್ತು ಕರ್ನಾಟಕದ ಪೋಲೀಸರಿಗೆ ತೋರಿಸುತ್ತೇನೆ ಅಂತ ಹೇಳಿಕೊಳ್ಳುತ್ತಿದ್ದರು.

ಆದರೆ ಇಲ್ಲಿ ಇಟ್ಟ ಮಾರನೇ ದಿನವೇ ಮೆಶೀನ್ ಕಳುವಾಯಿತಂತೆ.

*****

ಭೀಮನು ಧುರ್ಯೋದನನನ್ನು ಹೇಗೆ ಕೊಂದನು?
ಒಂದು ಮಾರ್ಕ್ಸಿನ ಪ್ರಶ್ನೆಯಾದರೆ ಸಾಮ್ರಾಟರ ಮಗ ಅಷ್ಟು ತಲೆತುರಿಸಿಕೊಳ್ಳುತ್ತಿರಲಿಲ್ಲ. ಅಷ್ಟು ದಡ್ಡನೆಂದು ತಿಳಿದಿರೇ? ಆ ಪ್ರಶ್ನೆ ೧೫ ಅಂಕಕ್ಕೆ ಕೇಳಲ್ಪಟ್ಟಿತ್ತು. ಆಗ್ಲೇ ಮೇಷ್ಟ್ರು ತುಂಬಾ ಸಲ ಹೇಳಿದ್ದರು ಹದಿನೈದು ಮಾರ್ಕ್ಸಿನ ಪ್ರಶ್ನೆಗೆ ಉತ್ತರಿಸುವಾಗ ಕೊನೆಯ ಪಕ್ಷ ಒಂದು ಪುಟವಾದರೂ ಬರೆಯಲೇಬೇಕೆಂದು. ಪ್ರಶ್ನೆ ಕೇಳುವವರಿಗೆ ಕಾಮನ್ ಸೆನ್ಸ್ ಬೇಡವೇ ಅಂತ ಬಯ್ದುಕೊಳ್ಳುತ್ತಾ ಕೊನೆಗೆ ಒಂದು ಉಪಾಯ ಕಂಡುಕೊಂಡ.

"ಭೀಮನು ಧುರ್ಯೋಧನನನ್ನು ಗುದ್ದಿ ಗುದ್ದಿ ಗುದ್ದಿ ಗುದ್ದಿ....." ಹೀಗೆ ಬರೆಯುತ್ತಾ ಪುಟದ ಕೊನೆಗೆ ".... ಗುದ್ದಿ ಕೊಂದನು." ಹೀಗೆ ಮುಗಿಸಿದ!


-
(ಕೋಳಿಯನ್ನು( ನಗೆಸಾಮ್ರಾಟರನ್ನು) ಕೇಳದೇ ಅಲ್ಲಿ ಇಲ್ಲಿ ಮಾಡಿದ ಸಂಗ್ರಹಕ್ಕೆ ಮಸಾಲೆ ಅರೆದದ್ದು ರಂಜಿತ್.)