Saturday, January 31, 2009

ಇದು ಕಾಫಿ ಕ್ಲಬ್


ಇದು ಕಾಫಿ ಕ್ಲಬ್!

ಕಾಫಿ ಗಿಡವನ್ನು ಬೆಳೆಸಿ ಕಾಫಿ ಬೀಜ ಪುಡಿ ಮಾಡಿ, ಕಬ್ಬನ್ನು ಹಿರಿದು ಸಕ್ಕರೆ ಮಾಡಿ, ಹಸುವನ್ನು ಸಾಕಿ ಹಾಲ್ಕರೆದು ಕಾಫಿ ಮಾಡುವ ಕಷ್ಟ ನೀವು ತೆಗೆದುಕೊಳ್ಳಬೇಕಿಲ್ಲ. ಕಪ್ಪು-ಸಾಸರ್ ಹೊಂದಿಸುವ, ತೊಳೆದಿಡುವ ರಗಳೆ ನಿಮಗಿಲ್ಲಿ ಇಲ್ಲ. ಇಲ್ಲಿ ಎಲ್ಲವೂ ಸಿದ್ಧವಿರುತ್ತೆ, ಬಂದು ಇಲ್ಲಿನ ಕಾಫಿ ಹೀರುತ್ತಾ ನಾಲ್ಕು ಘಳಿಗೆ ಕಳೆದು ಹೋದರೆ ಸಾಕು, ಕ್ಲಬ್ಬು ಪಾವನವಾಗುತ್ತೆ.

ವಿಪರೀತ ವೈಚಾರಿಕತೆಯನ್ನ, ನಿಮ್ಮ ಸಾಮಾಜಿಕ ಜವಾಬ್ದಾರಿಗಳನ್ನ, ಸಂವೇದನೆ- ಸಾದಾ ವೇದನೆಗಳನ್ನ ಇಲ್ಲಿ ಕ್ಲಬ್‌ನ ಎದುರಲ್ಲಿರುವ ಚಪ್ಪಲಿ ಸ್ಟ್ಯಾಂಡ್ ಬಳಿಯಲ್ಲೇ ಬಿಟ್ಟು ಒಳಬನ್ನಿ. ನಿಮ್ಮ ಹಮ್ಮು, ಬಿಮ್ಮು, ಸಿಟ್ಟು - ಸೆಡವು, ಪೂರ್ವಾಗ್ರಹಗಳಿಗೆಲ್ಲಾ ನೀವೇ ಜವಾಬ್ದಾರರು. ಕಾಫಿ ಕಪ್ಪುಗಳಲ್ಲಿ ದಯವಿಟ್ಟು ಕೈ ತೊಳೆಯಬೇಡಿ. ವೇಯಟರಿಗೆ ಟಿಪ್ಸ್ ಕೊಡುವುದ ಮರೆಯಬೇಡಿ.

ಬಿಸಿ ಬಿಸಿ ಕಾಫಿಯ ಹಬೆಯೇರುತಿದೆ. ಬನ್ನಿ ಒಂದೊಂದು ಕಪ್ ಹೀರಿ...

8 comments:

  1. ಸುಪ್ರೀತ್, ರಂಜಿತ್, ಹೇಮ,

    ಕಾಫಿ ಮೊದಲ ಡೋಸ್‌ನಲ್ಲೇ ಹಿತಮಿತವೆನಿಸುತ್ತೆ.....ಅದರ ಫೀಲ್ ಕುಡಿದಾದ ಮೇಲು ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು....ಮತ್ತೆ ಬರುತ್ತೇನೆ....

    ReplyDelete
  2. ನಮ್ ಕ್ಲಬ್ಬಿಗೆ ಆಗಾಗ ಬಂದು ಕಾಫಿ ಹೀರಿ ನೋಡಿ ಆಮೇಲೆ ನಿಮಗದರ ಫೀಲು, ಪಂಚು ತಿಳಿಯುತ್ತೆ...
    ಅಂದಹಾಗೆ ನಮ್ ಕ್ಲಬ್ಬಿಗೆ ಯಾವ ಸೇನಯವರೂ,ದಳದವರೂ ನುಗ್ಗಿ ಹಲ್ಲೆ ಮಾಡಲು ಸಾಧ್ಯವಿಲ್ಲ ಎಂಬ ಆಶ್ವಾಸನೆ ಧೈರ್ಯವಾಗಿ ಕೊಡುತ್ತೇವೆ.

    ReplyDelete
  3. if sri rama sene opposes valentines day what did rama and sita were in . were they not in love . muthalik be careful of youths . bastard we will hang you in your balls.

    ReplyDelete
  4. ಅಣ್ಣ ಅನಾಮಧೇಯ,

    ಪ್ರೇಮಿಗಳ ದಿನದ ಬಗ್ಗೆ ಮಾತಡೊಕ್ಕೆ ವಿಷಯ ಸಿಕ್ಕುತು ಅಂಥಾ ದೇವರುಗಳ ಬಗ್ಗೆ ನಿಮ್ಮ ಹೊಲಸು ಬಾಯಿಂದ ಮಾತಡಬಿಟ್ಟರಲ್ಲ, ನಿಮ್ಮ ಹೆಸರು ಹೇಳೊಕ್ಕೆ ನಿಮಗೆ ದೈರ್ಯ ಇಲ್ಲ, ಇನ್ನು ಸಮಾಜದ ಪ್ರಬಾವಿ ವ್ಯಕ್ತಿ ಬಗ್ಗೆ ಮಾತಡೋಕ್ಕೆ ನಿಮಗೆ ನಾಚಿಕೆ ಅಗೊಲ್ವ ???

    ReplyDelete
  5. ಅನಾನಿಮಸ್ಸರೇ,
    ಕಾಫಿ ಕ್ಲಬ್ಬಿಗೆ ಜಾತಿ, ಕುಲ-ಗೋತ್ರ, ಲಿಂಗ, ಬುದ್ಧಿವಂತಿಕೆ, ಮೂರ್ಖತನದ ಬೇಧವಿಲ್ಲದೆ ಯಾರುಬೇಕಾದರೂ ಬರಬಹುದು. ಆದರೆ ಹೆಸರಿಲ್ಲದವರು, ಪತ್ತೆ ಇಲ್ಲದವರು ಬಂದರೆ ಕಾಫಿ ಕೊಡಲಾಗದು. ಕಾಫಿ ಬಟ್ಟಲಲ್ಲಿರುವ ಕಾಫಿ ಹೀರಿ ಪಸಂದಾಗಿರಿ, ಅದು ಬಿಟ್ಟು ಬಟ್ಟಲಿಗೆ ಉಗುಳಿ ಕ್ಲಬ್ ಹಾಳು ಮಾಡಬೇಡಿ..

    ಸುಪ್ರೀತ್.ಕೆ.ಎಸ್

    ReplyDelete
  6. ಗುರುರವರೇ,
    ಇರಿ, ಇಲ್ಲೇ ಚರ್ಚೆ ಶುರು ಮಾಡ್ಬೇಡಿ...
    ಪ್ರೇಮಿಗಳ ದಿನಕ್ಕಾಗಿ ಹೊಸ ಚರ್ಚೆ ಶುರು ಮಾಡುವವರಿದ್ದೇವೆ.

    ಸುಪ್ರೀತ್

    ReplyDelete
  7. kafiklab nodide sri rama sene valentines day oppose maduvudarally tappenide.?preeti hesralli nadeyudellavanna oppabeka..?preeti preeti yagiddare olleyadu aadre premigal preeti yava reetiyadu vishleshne agatya anno anisike nandu

    ReplyDelete
  8. ಅನಾನಿಮಸ್ಸರೇ ನಿಮ್ಮ ಪ್ರತಿಕ್ರಿಯೆಯನ್ನು ಚರ್ಚೆಯ ಪೋಸ್ಟಿಗೆ ವರ್ಗಾಯಿಸಲಾಗಿದೆ.

    ಅಡ್ಮಿನ್

    ReplyDelete

ಕಾಫಿ ಕುಡೀತಾ ಹಂಗೇ ಒಂದಿಷ್ಟು ಮಾತಾಡಿ