Monday, April 26, 2010
ಎಲ್ರಿಗೂ ವಯಸ್ಸಾಗ್ತದೆ; ಒಬ್ರನ್ನ ಬಿಟ್ಟು..!
ಹೌದಲ್ವರಾ?
ಎಲ್ಲರಿಗೂ ವಯಸ್ಸಾಯ್ತದಲ್ವಾ?
..........
------
ಆದರೆ ಒಬ್ರನ್ನ ಬಿಟ್ಟು... ಅವರ್ಯಾರು ಅಂತೀರಾ??!
ಊಹಿಸಿ ನೋಡುವಾ....
ಯೆಸ್..!
ಇವರೇ...:)
Sunday, April 18, 2010
Monday, April 12, 2010
Sunday, April 4, 2010
ನಕ್ರೆ ಜೋಕೇ; ನಗದಿದ್ರೆ ಜೋಕೆ!
ಹೆಂಡತಿ ಒಂದು ಬೋರ್ಡ್ ನೋಡಿದಳು. ನೋಡಿ ಆಕೆ ಹೃದಯ ಬಾಯಿಗೆ ಬಂದಿತ್ತು. ಸ್ವರ್ಗಕ್ಕೆ ಮೂರೇ ಫೀಟು. ಇಷ್ಟಕ್ಕೂ ಅದರಲ್ಲಿದ್ದಿದ್ದು " ಬನಾರಸಿ ಸೀರೆ : ೧೦ ರೂ,, ನೈಲಾನ್ ಸೀರೆ : ೮ ರೂ, ಕಾಟನ್ ಸೀರೆ : ೫ ರೂ.
ರೀ ರೀ, ಒಂದೈದು ಸಾವ್ರ ಕೊಡ್ರಿ... ಒಂದಿಷ್ಟು ಸೀರೆ ಕೊಂಡ್ಕೋತೀನಿ.
ಸಾಮ್ರಾಟರು ತಲೆ ಚಚ್ಚಿಕೊಂಡು, "ಲೇ.. ಇಸ್ತ್ರಿ ಅಂಗಡಿ ಕಣೇ ಇದು!"
********
ಅಪ್ಪ : ಯಾಕೆ ಎಕ್ಸಾಮ್ ಗೆ ಹೋಗಿಲ್ಲ?
ಮಗ : ಪೇಪರ್ ಕಷ್ಟ ಇತ್ತಪ್ಪಾ!
ಅಪ್ಪ : ಅಲ್ಲ, ಎಕ್ಸಾಮ್ ಗೇ ಹೋಗದೇ ಅದ್ ಹ್ಯಾಗೆ ಕಷ್ಟ ಅಂತಿದ್ದೀ?
ಮಗ : ನಿನ್ನೆ ರಾತ್ರೀನೇ ಪ್ರಶ್ನೆಪತ್ರಿಕೆ ಲೀಕ್ ಆಗಿ ಸಿಕ್ಕಿತ್ತು..!
******
ಒಬ್ಬ ಜಿಪುಣಾಗ್ರೇಸರನಿಗೂ ನಗೆಸಾಮ್ರಾಟರಿಗೂ ಇರೋ ವ್ಯತ್ಯಾಸ ಏನು?
ಟ್ಯಾಕ್ಸಿ ಚಾಲಕ : ಸಾಹೇಬ್ರೇ, ಟ್ಯಾಕ್ಸಿ ದ್ದು ಬ್ರೇಕ್ ಫೇಲ್ ಆಗಿದೆ!
ಇದಕ್ಕೆ ಜಿಪುಣಾಗ್ರೇಸರ ನ ಮತ್ತು ಸಾಮ್ರಾಟರ ರಿಯಾಕ್ಷನ್ ನೋಡಾಣ.
ಸಾಮ್ರಾಟರು : ಪರ್ವಾಗಿಲ್ಲ ಬೇಜಾರ್ ಮಾಡ್ಕೋಬೇಡಯ್ಯ..ಬಿಡು, ಮುಂದಿನ ಸಲ ಖಂಡಿತಾ ಪಾಸ್ ಆಗುತ್ತೆ...
ಜಿಪುಣಾಗ್ರೇಸರ : ಬಡ್ಡಿ ಮಗನೇ, ಮೊದಲು ಮೀಟರ್ ಬಂದ್ ಮಾಡು!
**** **
ಒಮ್ಮೆ ಸಾಮ್ರಾಟರಿಗೆ ಕುಂದಾಪುರದಲ್ಲಿ ಆಕ್ಸಿಡೆಂಟ್ ಆಯ್ತು.
ಡಾಕ್ಟರು : ಸಾಮ್ರಾಟರೇ, ನಿಮ್ಗೆ ಸ್ಟಿಚ್ ಹಾಕ್ಬೇಕಾಗ್ತದೆ ಮಾರಾಯ್ರೇ...
ಸಾಮ್ರಾಟರು : ಎಷ್ಟ್ ಖರ್ಚ್ ಆತ್ತ್ ?
ಡಾಕ್ಟರು : ೮೦೦೦!
ಸಾಮ್ರಾಟರು : ಹ್ವಾಯ್, ಮಾಮೂಲಿ ಸ್ಟಿಚಸ್ ಹಾಕ್ರೆ ಸಾಕ್ ಮರ್ರೇ... ಎಂಬ್ರಾಯ್ಡರಿ ಎಂಥ ಬೇಡ..!
*****
ಆಸ್ಪತ್ರೆಯ ರೋಗಿಯೊಬ್ಬನಿಗೆ ಅಲ್ಲಿನ ನರ್ಸ್ ಮೇಲೆ ಪ್ರೀತಿ ಉಕ್ಕಿತು. ಹಳೇ ಕನ್ನಡ ಫಿಲಮ್ ಸ್ಟೈಲ್ ನಲ್ಲಿ “ ಐ ಲವ್ ಯೂ, ನೀನು ನನ್ನ ಹ್ರದಯ ಕದ್ದಿದ್ದಿ..” ಅಂಥ ಭಾವುಕನಾಗಿ ಅಂದಾಗ
ಹೆದರಿದ ನರ್ಸಮ್ಮ ಬಿಳಿಚಿಕೊಂಡ ಮೊಗದಿಂದ, “ಇಲ್ಲಾ ಇಲ್ಲ..ನಾವು ಕದ್ದಿದ್ದು ಬರೀ ಕಿಡ್ನಿ ಮಾತ್ರ!” ಅಂದಳು.
******
ಮಂತ್ರಿ : ಯುದ್ಧಕ್ಕೆ ಸಿದ್ಧರಾಗಿ ಅಂತ ಪಕ್ಕದ ರಾಜ್ಯದ ರಾಜ ಎಸ್ಸೆಮ್ಮೆಸ್ಸು ಕಳಿಸಿದ್ದಾನೆ, ಏನು ಮಾಡುವುದು ಮಹಾಪ್ರಭೂ?
ಪ್ರಭು : ಮೆಸ್ಸೇಜ್ ಸೆಂಡಿಂಗ್ ಫೈಲ್ಡ್ ಅಂತ ವಾಪಸ್ ಮೆಸ್ಸೇಜ್ ಕಳಿಸು!
******
(ಸಂಗ್ರಹ)
Subscribe to:
Posts (Atom)