Tuesday, July 24, 2012
Wednesday, July 4, 2012
Saturday, June 30, 2012
Wednesday, June 6, 2012
ಚಲನಚಿತ್ರಗಳು ನಮಗರಿವಾಗದಂತೆಯೇ ಕಲಿಸಿಕೊಡುವ ಪಾಠಗಳು..
ಹಾಲಿವುಡ್ ಹೇಳಿಕೊಡುವ ಪಾಠಗಳು:-
೧. ಕುಂಗ್ ಫು ಹೇಳಿಕೊಡುವುದು ಮತ್ತು ಅಭ್ಯಾಸ ಮಾಡುವುದು ಬಿಟ್ಟರೆ ಚೈನೀಸ್ ಜನರಿಗೆ ಬೇರೆ ಕೆಲ್ಸ ಇಲ್ಲ.
೨. ಶೇ ೫೦ ಕ್ಕೂ ಹೆಚ್ಚು ಅಮೇರಿಕನ್ನರು FBI / CIA ಏಜೆಂಟುಗಳಾಗಿ ಸದಾ ಮಫ್ತಿಯಲ್ಲಿರ್ತಾರೆ.
೩. ಅನ್ಯಗ್ರಹಜೀವಿಗಳು ಯಾವಾಗಲೂ ಅಮೇರಿಕಾವನ್ನೇ ಟಾರ್ಗೆಟ್ ಮಾಡ್ತಾರೆ.
೪. ಅಮೇರಿಲಾದಲ್ಲಿ ಮಾತ್ರ ನೀವು ರಕ್ತಪಿಪಾಸು (vampires), ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್ ರನ್ನು ನೋಡಬಹುದು
ಬಾಲಿವುಡ್ ಕಲಿಸಿಕೊಡುವುದು:-
೧. ವಿಲನ್ ಜೊತೆಗೆ ಫೈಟ್ ಮಾಡುವಾಗ ಚೂರೂ ನೋವಾಗದ ಹೀರೋ ಗೆ, ಹೀರೋಯಿನ್ನು ಗಾಯ ತೊಳೆವಾಗ ಇನ್ನಿಲ್ಲದಷ್ಟು ನೋವು ಬರುತ್ತೆ.
೨. ಪತ್ತೇದಾರರು / ಪೋಲೀಸರು ಯಾವಾಗಲೂ ಸಸ್ಪೆಂಡ್ ಆದ ಮೇಲೆಯೇ ಉತ್ತಮವಾಗಿ ಕೆಲಸ ಮಾಡಬಲ್ಲರು.
೩. ಹೀರೋ ರಸ್ತೆಯಲ್ಲಿ ಕುಣಿಯಲು ಶುರುಮಾಡಿದಾಗ ರಸ್ತೆಯಲ್ಲಿ ಹೋಗುವವರೆಲ್ಲರಿಗೂ ಸ್ಟೆಪ್ಸ್ ಹಾಕುವುದು ಗೊತ್ತಿರುತ್ತೆ.
೪. ಬಾಂಬ್ ನ ವೈರ್ ತುಂಡರಿಸುವಾಗ ಹೀರೋ ಯಾವಾಗಲೂ ಸರಿಯಾದ ವೈರ್ ನ್ನೇ ತುಂಡು ಮಾಡ್ತಾನೆ.
ಕನ್ನಡ ಫಿಲಮ್ ಗಳು ತಿಳಿಸುವ ಅಂಶಗಳು:-
೧. ಹೀರೋ ವಿಲನ್ ಗೆ ಹೊಡೆವಾಗಲೆಲ್ಲ "ಡಿಶುಂ" ಅನ್ನುವ ಶಬ್ದ ಬರುತ್ತೆ. ಪಿಸ್ತೂಲ್ ನಿಂದ ’ಡಿಶ್ಕ್ಯಾಂ’ ಅನ್ನುವ ಸದ್ದು ಬರುತ್ತೆ.
೨. ನೋಡೋಕೆ ಕೆಟ್ಟದಾಗಿರುವವರೆಲ್ಲ ವಿಲನ್ ಗಳಾಗಿರ್ತಾರೆ.
೩. ಹೀರೋ ಚಿತ್ರದಲ್ಲಿ ಮೆಕ್ಯಾನಿಕ್ ಪಾತ್ರ ಮಾಡುತ್ತಿದ್ದರೂ ರಸ್ತೆಯಲ್ಲಿ ಅವನು ದೊಡ್ಡ ’ಹೀರೋ’ ಎಂಬಂತೆ ಅಲ್ಲಿನ ಜನರು ಅವನತ್ತಲೇ ನೋಡ್ತಾ ಇರ್ತಾರೆ.
೪. ಹೀರೋಯಿನ್ ಗೆಳತಿ ಹೀರೋಯಿನ್ ಗಿಂತಲೂ ಚೆನ್ನಾಗಿದ್ರೂನೂ ಹೀರೋ ಗೆ ಹೀರೋಯಿನ್ ಮೇಲೆಯೇ ಮೊದಲ ನೋಟದ ಪ್ರೀತಿ ಹುಟ್ಟುತ್ತದೆ.
Subscribe to:
Posts (Atom)